Advertisement
ಮುಂಜಾನೆಯ ಬ್ರಾಹ್ಮಿà ಮುಹೂರ್ತದ ಸುಂದರ ಘಳಿಗೆಯನ್ನು ಕಣ್ತುಂಬಿಕೊಳ್ಳುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ದೇಗುಲದ ಹೊರಾಂಗಣದಲ್ಲಿ ಶಂಖ, ಚಕ್ರ, ಗದಾ, ಪದ್ಮ, ಕೊಡಲಿ, ತಾವರೆ, ಮೊದಲಾದವುಗಳನ್ನು ಚಿತ್ರಿಸಿದ ರೀತಿಯಲ್ಲಿ ಹಣತೆಗಳನ್ನು ಹಚ್ಚಲಾಗಿತ್ತು. ದೇಗುಲದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಸೇರಿದಂತೆ ಹಲವು ಗಣ್ಯರು ಆ ಪುಣ್ಯ ಕ್ಷಣಗಳನ್ನು ಕಣ್ತುಂಬಿಕೊಂಡರು.
ಗರ್ಭಗುಡಿಯಲ್ಲಿ ಶ್ರೀ ದೇವರ ಅಲಂಕಾರದ ಬಳಿಕ ನಂದಾದೀಪ ಬೆಳಗಿ ಬಳಿಕ ಭಕ್ತರು ಹಣತೆಯನ್ನು ಬೆಳಗಿದರು. ವಿದ್ಯುತ್‌ದೀಪಗಳಿಂದ ಮುಕ್ತವಾಗಿದ್ದ ಕ್ಷೇತ್ರವು ಅತ್ಯಂತ ವೈಭವದಿಂದ ಕಂಗೊಳಿಸಿತು. ಜತೆಗೆ ಕ್ಷೇತ್ರದ ಆರಾಧ್ಯಮೂರ್ತಿಯನ್ನು ವಿಶೇಷ ರೀತಿಯಲ್ಲಿ ಮಲ್ಲಿಗೆ ಸಹಿತ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.