Advertisement

ಅಧ್ಯಯನ ಅನಂತರ ಶಿಷ್ಯರಿಗೆ ಮಠದ ಜವಾಬ್ದಾರಿ: ಶ್ರೀ ವಿದ್ಯಾಧೀಶತೀರ್ಥರು

01:41 AM May 14, 2019 | Team Udayavani |

ಉಡುಪಿ: ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ಇನ್ನು 8 ವರ್ಷಗಳ ಅಧ್ಯಯನ ನಡೆಯಬೇಕಾಗಿದ್ದು ಹಂತ ಹಂತವಾಗಿ ಮಠದ ಜವಾಬ್ದಾರಿಗಳನ್ನು ಕೊಡುತ್ತೇವೆ ಎಂದು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.

Advertisement

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರ ಅಭಿಪ್ರಾಯಗಳು ಇಂತಿವೆ.

– ಈಗ ಕಿರಿಯ ಶ್ರೀಗಳನ್ನು ನೇಮಿಸಿದ್ದೀರಿ. ಅವರಿಗೆ ನೀವು ಕೊಡುವ ಹೊಣೆಗಾರಿಕೆಗಳೇನು?
ನಾಲ್ಕು ವರ್ಷಗಳ ಅಧ್ಯಯನವನ್ನು ಪಲಿಮಾರು ಮಠದ ಯೋಗದೀಪಿಕಾ ಗುರುಕುಲದಲ್ಲಿ ನಡೆಸಿದ್ದಾರೆ. ಈಗಾಗಲೇ ವೇದ ಮಂಗಲವಾಗಿದೆ. ಇನ್ನು ಎಂಟು ವರ್ಷ ಅಧ್ಯಯನ ನಡೆಸಬೇಕಾಗಿದೆ. ನಾವೊಬ್ಬರೇ ಎಲ್ಲ ಪಾಠಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಹಿರಿಯ ವಿದ್ವಾಂಸ ಪಡುಬಿದ್ರಿ ಲಕ್ಷ್ಮೀನಾರಾಯಣ ಶರ್ಮರು ವ್ಯಾಕರಣ, ಸಾಹಿತ್ಯ ಪಾಠಗಳನ್ನು ಮಾಡುತ್ತಾರೆ. ನಾವು ತರ್ಕ, ಉಪನಿಷತ್ತುಗಳ ಪಾಠ ಮಾಡುತ್ತೇವೆ. ಮೀಮಾಂಸ, ವೇದಾಂತದಲ್ಲಿ ಅವರು ಉನ್ನತಾಧ್ಯಯನ ನಡೆಸಬೇಕಾಗಿದೆ.

– ಪರ್ಯಾಯ ಅವಧಿ ಮುಗಿದ ಬಳಿಕದ ಚಿಂತನೆಗಳೇನು?
ಪರ್ಯಾಯ ಅವಧಿಯಲ್ಲಿರುವಾಗ ಕಿರಿಯ ಸ್ವಾಮೀಜಿಯವರಿಗೆ ಪಾಠ ಹೇಳಲು ಸಮಯ ಸಾಕಾಗುವುದಿಲ್ಲ. ಹೀಗಾಗಿ ಪರ್ಯಾಯ ಅವಧಿ ಬಳಿಕ ಪಾಠಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ.

– ಕಿರಿಯ ಶ್ರೀಗಳಿಗೆ ಕೊಡುವ ಇತರ ತರಬೇತಿಗಳು, ಜವಾಬ್ದಾರಿಗಳೇನು?
ಧರ್ಮ ಪ್ರಚಾರವನ್ನು ಮಾಡುವ ಬಗ್ಗೆ ತಿಳಿಯಲು ಅವರನ್ನು ನಮ್ಮೊಂದಿಗೆ ಸಂಚಾರಕ್ಕೆ ಕರೆದುಕೊಂಡು ಹೋಗುತ್ತೇವೆ. ಎಂಟು ವರ್ಷಗಳ ಪೂರ್ತಿ ಅಧ್ಯಯನ ಬಳಿಕ ಹಂತ ಹಂತವಾಗಿ ಮಠದ ಜವಾಬ್ದಾರಿಯನ್ನು ವಹಿಸಿಕೊಡುತ್ತೇವೆ.

Advertisement

– ಪಾಠಕ್ಕೆ ಹೆಚ್ಚು ಆದ್ಯತೆ ಎಂದರೆ ಸಂಚಾರದ ಪ್ರಮಾಣ ಕಡಿಮೆಯಾಗುತ್ತದೆಯೆ?
ಹೌದು. ಒಂದು ಕಡೆ ಕುಳಿತು ಪಾಠವನ್ನು ಹೇಳುತ್ತೇವೆ. ಸಂಚಾರಕ್ಕೆ ಹೋದರೂ ದೀರ್ಘ‌ ಕಾಲ ಉಳಿದುಕೊಂಡು ಪಾಠ ನಡೆಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next