Advertisement

ಶ್ರೀ ಲಕ್ಷ್ಮೀನಾರಾಯಣ ಮಂದಿರ: ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಸಂಪನ್ನ

01:06 PM Mar 31, 2023 | Team Udayavani |

ಅಂಧೇರಿ: ಮೊಗವೀರ ಸಮಾಜದ ಹಿರಿಯ ಧಾರ್ಮಿಕ ಸಂಸ್ಥೆ ಶ್ರೀ ಮದ್ಭಾರತ ಮಂಡಳಿ ಸಂಚಾಲಕತ್ವದ ಅಂಧೇರಿ ಪಶ್ಚಿಮದ ವೀರ ದೇಸಾಯಿ ರೋಡ್‌, ಎಂವಿಎಂ ಎಜುಕೇಶನಲ್‌ ಕ್ಯಾಂಪಸ್‌ ಸಮೀಪವಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ 21ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾ. 29ರಂದು ಶ್ರೀಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಕ್ಷೇತ್ರದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ಹಾಗೂ ಪುರೋಹಿತ ವೃಂದದವರಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಿ ದವು. ಬೆಳಗ್ಗೆ 8.30ರಿಂದ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ನವ ಕಲಶ ಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಮತ್ತು ಕಲಶಾಭಿಷೇಕ, ಮಹಾಪೂಜೆ, ಬಳಿಕ ಗಣೇಶ್‌ ಚಂದ್ರ ಪ್ರಸಾದ್‌ ಬೈಲೂರು ಬಲಿ ಪಾತ್ರಿಯವರಿಂದ ದೇವರ ಬಲಿ ಮೂರ್ತಿಯ ಉತ್ಸವ ಬಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಜರಗಿತು.

ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ಅಪರಾಹ್ನ 2ರಿಂದ ರಾತ್ರಿ 7ರ ವರೆಗೆ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ, ರಾತ್ರಿ 7ರಿಂದ ರಂಗ ಪೂಜೆ ದೇವರ ಸನ್ನಿಧಿಯಲ್ಲಿ ನೆರವೇರಿತು. ಮಧ್ಯಾಹ್ನ ವಿವಿಧ ಸಂಘ – ಸಂಸ್ಥೆಗಳ ಸದಸ್ಯರಿಂದ ಜರಗಿದ ಭಜನ ಕಾರ್ಯಕ್ರಮವನ್ನು ಉದ್ಯಮಿ ಶ್ರೀನಿವಾಸ್‌ ಕಾಂಚನ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ್‌ ಪಿ. ಪುತ್ರನ್‌, ಉಪಾಧ್ಯಕ್ಷರಾದ ಕೂಳೂರು ನಾಗೇಶ್‌ ಎಲ್‌. ಮೆಂಡನ್‌ ಮತ್ತು ಒಡೆಯರ ಬೆಟ್ಟು ಗೋವಿಂದ ಎನ್‌. ಪುತ್ರನ್‌, ಗೌರವ ಪ್ರಧಾನ ಕಾರ್ಯದರ್ಶಿ ಲೋಕನಾಥ್‌ ಪಿ. ಕಾಂಚನ್‌, ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯದರ್ಶಿ ದಿಲೀಪ್‌ ಮೂಲ್ಕಿ, ಮಂಡಳಿಯ ಮಾಜಿ ಅಧ್ಯಕ್ಷ ಕೆ. ಎಲ್‌. ಬಂಗೇರ, ಮಾಜಿ ಕಾರ್ಯದರ್ಶಿ ಸಂಜೀವ ಸಾಲ್ಯಾನ್‌, ಲಕ್ಷ್ಮಣ್‌ ಶ್ರೀಯಾನ್‌, ದೇವರಾಜ್‌ ಬಂಗೇರ, ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ, ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ದಾಮೋದರ ಬಿ. ಕಾಂಚನ್‌, ಶ್ರೀ ಮದ್ಭಾರತ ಮಂಡಳಿಯ ಜತೆ ಕಾರ್ಯದರ್ಶಿಗಳಾದ ಪಲಿಮಾರು ಹರಿಶ್ಚಂದ್ರ ಸಿ. ಕಾಂಚನ್‌, ಕಾಪು ಮೋಹನ್‌ದಾಸ್‌, ಒ. ಡಿ. ಮೆಂಡನ್‌ ಉಪಸ್ಥಿತರಿದ್ದರು.

ಗೌರವ ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್‌. ಪುತ್ರನ್‌, ಜತೆ ಕೋಶಾಧಿಕಾರಿ ಬೈಕಂಪಾಡಿ ಶ್ಯಾಮ ಕೆ. ಪುತ್ರನ್‌, ಬೋಳೂರು ಅಶೋಕ್‌ ಎನ್‌. ಸುವರ್ಣ, ಸಮಿತಿ ಸದಸ್ಯರಾದ ಪಡುಬಿದ್ರೆ ಜಗನ್ನಾಥ್‌ ಆರ್‌. ಕಾಂಚನ್‌, ಹೊಸಬೆಟ್ಟು ಮಹಾಬಲ, ಕಾಪು ದೇವದಾಸ್‌ ಎಲ್‌. ಅಮೀನ್‌, ಅಳಿಕೆ ಪುರಂದರ ಅಮೀನ್‌, ತೆಂಕ ಎರ್ಮಾಳ್‌ ಮೋಹನ ಅಮೀನ್‌, ಬೈಕಂಪಾಡಿ ಹರೀಶ್‌ ಎಸ್‌. ಪುತ್ರನ್‌, ಕಲ್ಯಾಣು³ರ, ಪ್ರಶಾಂತ್‌ ತಿಂಗಳಾಯ, ದೊಡ್ಡ ಎರ್ಮಾಳು ರಮೇಶ್‌ ಅಮೀನ್‌, ಎರ್ಮಾಳ್‌ ಸುರೇಶ್‌ ಕುಂದರ್‌, ಮಲ್ಪೆ ತೊಟ್ಟಂ ಚಂದ್ರಕಾಂತ್‌ ಕೋಟ್ಯಾನ್‌, ಪೂಜಾ ಸಮಿತಿಯ ಸದಸ್ಯರಾದ ಸಂಜೀವ ಬಿ. ಚಂದನ್‌, ಸುರೇಂದ್ರನಾಥ್‌ ಹಳೆಯಂಗಡಿ, ರತ್ನಾಕರ್‌ ಬಂಗೇರ, ವಾಸು ಉಪ್ಪೂರು, ಕೇಶವ ಆರ್‌. ಪುತ್ರನ್‌ ಮೊದಲಾದವರು ಧಾರ್ಮಿಕ ಉತ್ಸವದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಸಮಾಜ ಬಾಂಧವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next