Advertisement

ಶ್ರೀ ರೇವಣಸಿದ್ದೇಶ್ವರ ಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳಿಂದ ಭಿಕ್ಷಾಟನೆ

07:13 PM Mar 11, 2023 | Team Udayavani |

ಕೊರಟಗೆರೆ: ಶ್ರೀ ರೇವಣ್ಣ ಸಿದ್ದೇಶ್ವರ ಕಾಗಿನೆಲೆ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳು ಮಠದ ಅಭಿವೃದ್ಧಿಗೆ ಜೋಳಿಗೆ ಹಿಡಿದು ಗ್ರಾಮಗಳತ್ತ ಪ್ರಯಾಣ ಬೆಳೆಸುತ್ತಿದ್ದು, ಶ್ರೀಗಳಿಗೆ ಪ್ರತಿ ಗ್ರಾಮದಲ್ಲೂ ಭಕ್ತರಿಂದ ಅಭೂತಪೂರ್ವ ಸ್ವಾಗತ ಕಂಡುಬಂದಿದೆ.

Advertisement

ಕಾಗಿನೆಲೆ ಶಾಖಾ ಮಠ ಹೊಸದುರ್ಗ ಮಠದ ಅಭಿವೃದ್ಧಿಗೆ ಶ್ರೀಗಳು 100 ದಿನ 1000 ಹಳ್ಳಿ ಎಂಬ ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಶ್ರೀಗಳ ಈ ಮಹತ್ವದ ಕಾರ್ಯಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ವಾಗತ ಕಂಡು ಬರುತ್ತಿದ್ದು, ಪ್ರತಿ ಗ್ರಾಮದಲ್ಲೂ ನಿರೀಕ್ಷೆ ಮೀರಿ ಭಕ್ತಾದಿಗಳು ಸ್ವಾಮೀಜಿಗಳನ್ನು ಬರ ಮಾಡಿಕೊಳ್ಳುತ್ತಿರುವುದಲ್ಲದೆ, ಸ್ವಾಮೀಜಿಗಳ ಅಭಿವೃದ್ಧಿ ಕಾರ್ಯಕ್ಕೆ ಭಕ್ತರಿಂದ ನಿರೀಕ್ಷೆ ಮೀರಿ ದೇಣಿಗೆ ಸಂಗ್ರಹವಾಗುತ್ತಿದೆ.

ಶ್ರೀ ರೇವಣಸಿದ್ದೇಶ್ವರ ಕಾಗಿನೆಲೆ ಕನಕ ಗುರು ಪೀಠ ಹೊಸದುರ್ಗ ಶಾಖ ಮಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳು ಕಳೆದ ಎರಡು ಮೂರು ತಿಂಗಳುಗಳಿಂದ ಬೆಂಗಳೂರು ವಿಭಾಗೀಯ ಕ್ಷೇತ್ರಗಳಲ್ಲಿ ಕಾರ್ಯಕ್ರಮ ದಡಿ ಪ್ರಯಾಣ ಬೆಳೆಸುತ್ತಿದ್ದು, ಕೊರಟಗೆರೆ ತಾಲೂಕಿನಲ್ಲಿ ಕಳೆದ ನಾಲ್ಕು ಐದು ದಿನಗಳಿಂದ ನಿರಂತರವಾಗಿ ಹಳ್ಳಿಗಳ ಕಡೆ ಪ್ರಯಾಣ ಬೆಳೆಸುತ್ತಿದ್ದು, ಕಾರ್ಯಕ್ರಮ ಅದ್ಬುತ ಪೂರ್ವ ಯಶಸ್ಸು ಕಂಡಿದೆ ಎಂದು ಸ್ವಾಮೀಜಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳು ಮಾತನಾಡಿ, ಭಕ್ತಾದಿಗಳು ಶ್ರೀಮಠದ ಕಡೆಗೆ ಆಕರ್ಷಿಸುವ ದೃಷ್ಟಿಯಿಂದ ನೂರು ದಿನ ಸಾವಿರ ಹಳ್ಳಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶ್ರೀ ಮಠದಲ್ಲಿ ವಿದ್ಯಾರ್ಥಿ ನಿಲಯ ಕಾಮಗಾರಿ ನಡೆಯುತ್ತಿದ್ದು ಜೊತೆಗೆ ಏಕಶಿಲಾ ಕನಕದಾಸರ ಪ್ರತಿಮೆಯನ್ನು ಅನಾವರಣಗೊಳಿಸಲು ಸಿದ್ಧತೆಗೊಳುತ್ತಿದ್ದು, ಇದು ಅನಾವರಣಗೊಂಡ್ರೆ ಏಷ್ಯಾ ಖಂಡದಲ್ಲಿಯೇ ಇದೇ ಪ್ರಥಮ ಕನಕದಾಸರ ಏಕಶಿಲಾ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಒಂದು ಐತಿಹಾಸಿಕ ಪ್ರದೇಶವಾಗಿ ಹೊರಹೊಮ್ಮಲಿದೆ .ನಾವು ಶ್ರೀ ಮಠದ ಅಭಿವೃದ್ಧಿಗೆ ಇಲ್ಲಿಗೆ 350 ಹಳ್ಳಿಗಳನ್ನು ಭೇಟಿ ಮಾಡಲಾಗಿ ಕೊರಟಗೆರೆ ತಾಲೂಕಿನಲ್ಲಿ ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.

ಕೊರಟಗೆರೆ ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಕುರುಬ ಸಮುದಾಯ ತುಂಬಾ ಜಾಗೃತರಾಗುತ್ತಿದ್ದಾರೆ , ಶ್ರೀಮಠದ ಕಡೆ ಜನರು ಹೆಚ್ಚು ಆಸಕ್ತಿ ತಾಳುತ್ತಿದ್ದು, ನೂರು ದಿನ ಸಾವಿರ ಹಳ್ಳಿ ಕಾರ್ಯಕ್ರಮ ತುಂಬಾ ಅಭೂತ ಪೂರ್ವ ಯಶಸ್ಸು ಕಂಡಿದೆ, ಕೊರಟಗೆರೆ ತಾಲೂಕಿನಲ್ಲಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದೇವೆ, ಈ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದ ಎಲ್ಲರಿಗೂ ಕನಕದಾಸ ಹಾಗೂ ಶ್ರೀ ರೇವಣಸಿದ್ದೇಶ್ವರ ಶ್ರೇಯಸ್ಸು ಕಲ್ಪಿಸಲಿ, ತಾಲೂಕಿನ ಸಿದ್ದರಬೆಟ್ಟದ ಕಾರ್ಯಕ್ರಮಗಳಿಗೆ ಹೆಚ್ಚು ಭಾಗವಹಿಸುವುದರ ಜೊತೆಗೆ ಹೊಸದುರ್ಗ ಮಠಕ್ಕೂ ಭಕ್ತಾದಿಗಳು ಆಗಮಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next