Advertisement

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ನೃತ್ಯಸೇವೆಗೆ ಆಕಾಂಕ್ಷಿಗಳ ದಂಡು

08:07 PM Oct 13, 2021 | Team Udayavani |

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಪರ್ವಕಾಲದಲ್ಲಿ ಕ್ಷೇತ್ರದ ವಿಶೇಷ ಸೇವೆಗಳಲ್ಲಿ ಒಂದಾದ ನೃತ್ಯಸೇವೆಗೆ ದಿನದಿಂದ ದಿನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ.

Advertisement

ಗತಕಾಲದಲ್ಲಿ ನಾಟ್ಯರಾಣಿ ಗಂಧರ್ವ ಕನ್ಯೆಯಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಿಯ ಕ್ಷೇತ್ರವಾದ ಇಲ್ಲಿ ನೃತ್ಯಸೇವೆಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇಲ್ಲಿ ನೃತ್ಯಸೇವೆ ಸಲ್ಲಿಸಿದರೆ ಮನೋಕಾಮನೆ ನೆರವೇರಲಿದೆ ಎನ್ನುವ ಪ್ರತೀತಿ ಇದ್ದು, ಉಡುಪಿ ಆಸುಪಾಸಿನವರಲ್ಲದೆ, ಪರವೂರಿನಿಂದಲೂ ಕ್ಷೇತ್ರಕ್ಕೆ ಬಂದು ನೃತ್ಯಸೇವೆ ನೀಡಿ ಕೃತಾರ್ಥ ರಾಗುತ್ತಿದ್ದಾರೆ.

ನವರಾತ್ರಿ ಸಂದರ್ಭ ದಿನನಿತ್ಯ ಊರ, ಪರವೂರ ಭಕ್ತರ ಸೇವಾರೂಪದ ಚಂಡಿಕಾಯಾಗ, ಸಹಸ್ರ ನಾಮಾರ್ಚನೆ, ಕಲೊ³àಕ್ತ ಪೂಜೆ, ರಂಗಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ದೀಪಾರಾಧನೆ, ಬಲಿ ಉತ್ಸವ ನಡೆಯುತ್ತಿದೆ. ಇದಲ್ಲದೆ ಲಲಿತಾ ಪಂಚಮಿಯಂದು ಜೋಡಿ ಶ್ರೀ ಲಲಿತಾ ಸಹಸ್ರ ಕದಳೀಯಾಗ ನೆರವೇರಿದೆ. ನಿರಂತರವಾಗಿ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ವಿತರಣೆ ನಡೆಯುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಭಜನ ತಂಡಗಳಿಂದ ಭಜನ ಸಂಕೀರ್ತನೆ, ಕುಣಿತ ಭಜನೆ, ಪ್ರಸಿದ್ಧ ಚಂಡೆ ಬಳಗದ ಚಂಡೆ ವಾದನ, ವಿವಿಧೆಡೆಗಳ ಕಲಾ ತಂಡಗಳಿಂದ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆಯುತ್ತಿವೆ. ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಏಮ್ಸ್ ಗೆ ದಾಖಲು

Advertisement

ನೃತ್ಯಸೇವೆಗೊಲಿವ ದೇವಿ
ಕ್ಷೇತ್ರದ ಪ್ರಮುಖ ಸೇವೆಯಾದ ನೃತ್ಯಸೇವೆ ಸಮರ್ಪಿಸಲು ಕ್ಷೇತ್ರಕ್ಕೆ ನೃತ್ಯಾಕಾಂಕ್ಷಿಗಳು ಹೆಚ್ಚೆಚ್ಚು ಆಗಮಿಸಲು ಆದಿಶಕ್ತಿಯ ಮಹಿಮೆಯೇ ಕಾರಣ. ಈ ಮೊದಲು ಸೇವೆ ಸಲ್ಲಿಸಿದ ನೃತ್ಯ ಸೇವಾರ್ಥಿಗಳ ಇಚ್ಛೆ ನೆರವೇರಿದೆ. ಇಲ್ಲಿ ನೃತ್ಯಸೇವೆ ಸಲ್ಲಿಸಲು ಶುಲ್ಕ ಪಾವತಿಸಬೇಕಾಗಿಲ್ಲ. ಹೆಸರು ನೋಂದಾಯಿಸಿದರೆ ಸಾಕು. ಕ್ಷೇತ್ರದಿಂದಲೇ ಅನುಗ್ರಹ ಪ್ರಸಾದ ನೀಡಲಾಗುವುದು. ನೃತ್ಯಸೇವೆ ಸಮರ್ಪಿಸಿದ, ಸಮರ್ಪಿಸಲಿರುವ ಸೇವಾರ್ಥಿಗಳ ಮನದಿಂಗಿತವನ್ನು ಮಾತೆ ಈಡೇರಿಸಲಿ.
-ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿ.

 

Advertisement

Udayavani is now on Telegram. Click here to join our channel and stay updated with the latest news.

Next