Advertisement
ಕೊಹ್ಲಿ ಸರ್ರೆ ಕೌಂಟಿಯಲ್ಲಿಅನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವುದರಿಂದ ಕೊಹ್ಲಿ ಅಲ್ಲಿ ಕೌಂಟಿ ಆಡಿ ಅನುಭವ ಗಳಿಸಲು ತೀರ್ಮಾನಿಸಿದ್ದಾರೆ. ಆದ್ದರಿಂದ ಜೂನ್ ತಿಂಗಳಿಡೀ ಅವರು ಇಂಗ್ಲೆಂಡ್‌ನಲ್ಲಿ ಸರ್ರೆ ಪರ ಆಡುತ್ತಾರೆ. ಅವರು ಡಬ್ಲಿನ್‌ನಲ್ಲಿ ಅಯರ್‌ಲ್ಯಾಂಡ್ ವಿರುದ್ಧ ಜೂನ್ ಅಂತ್ಯಕ್ಕೆ ನಡೆಯುವ ಎರಡು ಟಿ20 ಪಂದ್ಯಕ್ಕೂ ಲಭಿಸುವ ಸಾಧ್ಯತೆ ಇಲ್ಲ. ಆಗ ಟಿ20 ತಂಡದ ನಾಯಕತ್ವ ರೋಹಿತ್ ಶರ್ಮ ಪಾಲಾಗುವ ಸಂಭವವಿದೆ.
ಇದೇ ವೇಳೆ ಕೌಂಟಿ ಆಡುತ್ತಿರುವ ಇಶಾಂತ್ ಶರ್ಮ, ಚೇತೇಶ್ವರ ಪೂಜಾರ ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್ ಆಡುವುದಿಲ್ಲ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲಿ ಹಬ್ಬಿರುವ ಈ ಸುದ್ದಿ ಸುಳ್ಳು, ಅವರು ಭಾರತಕ್ಕೆ ಬಂದು ಟೆಸ್ಟ್‌ನಲ್ಲಿ ಆಡಲ್ದಿದಾರೆಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಖಚಿತಪಡಿಸಿದ್ದಾರೆ.
Related Articles
ಇದೇ ವೇಳೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ “ಎ’ ತಂಡವೂ ಪ್ರಕಟಗೊಳ್ಳಲಿದೆ. ಪೃಥ್ವಿ ಶಾ, ಶುಭಮನ್ ಗಿಲ್, ಶಿವಂ ಮೊದಲಾದ ಯುವ ಕ್ರಿಕೆಟಿಗರು ಈ ತಂಡಕ್ಕೆ ಆಯ್ಕೆಯಾಗುವುದು ಖಚಿತವಾಗಿದೆ. ಭಾರತ ತಂಡ ಅಲ್ಲಿ ವೆಸ್ಟ್ ಇಂಡೀಸ್ “ಎ’ ತಂಡವ ನ್ನೊಳಗೊಂಡ ಏಕದಿನ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿ ಜೂನ್ 22ರಿಂದ ಆರಂಭವಾಗಲಿದೆ.
Advertisement
ಅಶ್ವಿನ್ ಟೆಸ್ಟ್ ಭವಿಷ್ಯಕ್ಕೆ ಧಕ್ಕೆ?ಸದ್ಯ ಭಾರತೀಯ ತಂಡದ ಕೆಲ ಕ್ರಿಕೆಟಿಗರ ಭವಿಷ್ಯದ ಬಗ್ಗೆ ಊಹಾಪೋಹಗಳು ಹಬ್ಬಿವೆ. ಆ ಪ್ರಕಾರ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಟೆಸ್ಟ್ ಭವಿಷ್ಯ ಸಂಕಷ್ಟದಲ್ಲಿದೆ. 2 ವರ್ಷದ ಹಿಂದೆ ಸೀಮಿತ ಓವರ್‌ಗಳ ತಂಡದಿಂದ ಹೊರಬಿದ್ದಿದ್ದ ಅವರು ಈಗ ಟೆಸ್ಟ್‌ನಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಅಫ್ಘಾನಿಸ್ಥಾನದ ವಿರುದ್ಧ ಟೆಸ್ಟ್‌ಗೆ ಅಶ್ವಿನ್ ಅವರನ್ನು ಆಡಿಸದಿರುವ ಸಾಧ್ಯತೆಯಿದೆ. ಅನಂತರ ಇಂಗ್ಲೆಂಡ್‌ನಲ್ಲಿ ನಡೆಯುವ ಪ್ರವಾಸಕ್ಕೆ ಆಯ್ಕೆಯಾದರೂ ಅಲ್ಲಿ ವಿಫಲವಾದರೆ ಶಾಶ್ವತವಾಗಿ ಅವರು ತಂಡದಿಂದ ಹೊರಬೀಳುವ ಪರಿಸ್ಥಿತಿಯಿದೆ. ಅವರ ಬದಲು ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಜಾಗ ಪಡೆಯಲಿದ್ದಾರೆಂದು ಊಹಿಸಲಾಗಿದೆ.