Advertisement

ಗೋವಾ ರಾಜ್ಯಪಾಲರಾಗಿ ಪಿ.ಎಸ್.ಶ್ರೀಧನ್ ಪಿಳ್ಳೆ ಅಧಿಕಾರ ಸ್ವೀಕಾರ

04:37 PM Jul 15, 2021 | Team Udayavani |

ಪಣಜಿ : ಗೋವಾದ ನೂತನ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದ  ಪಿ. ಎಸ್. ಶ್ರೀಧರನ್ ಪಿಳ್ಳೆ ಅವರು ಇಂದು(ಗುರುವಾರ, ಜುಲೈ 15) ಗೋವಾದ ರಾಜ್ಯಪಾಲರಾಗಿ  ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಾಂಕರ ದತ್ತ ಅವರು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು.

ಇದನ್ನೂ ಓದಿ : ಕೋವಿಡ್ ಬಿಕ್ಕಟ್ಟಿನಲ್ಲೂ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸಿಗುತ್ತಿದೆ 1 ಲಕ್ಷ ರೂ.ಬೋನಸ್..!

ಗೋವಾದ ದೋನಾಪಾವುಲ್‍ ನಲ್ಲಿರುವ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಮುಖ್ಯಮಂತ್ರಿ ಪ್ರಮೋದ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಮತ್ತಿತರರು ಉಪಸ್ಥಿತರಿದ್ದರು.

ಗೋವಾದ ನೂತನ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೆ ಅವರು ಇದಕ್ಕೂ ಮುನ್ನಾ ಮಿಜೋರಾಂ ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಪಿಳ್ಳೆ ಒಬ್ಬ ಪ್ರಸಿದ್ಧ ಲೇಖಕರೂ ಆಗಿದ್ದಾರೆ.

Advertisement

ಇದನ್ನೂ ಓದಿ : ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್‌ ನ ಸ್ವೀಪರ್ ಪತ್ನಿಯೇ ಬ್ಲಾಕ್‌ ನ ಮುಖ್ಯಸ್ಥೆಯಾಗಿ ಅಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next