Advertisement

ಪೊಳಲಿ ಶ್ರೀ ರಾಜರಾಜೇಶರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

07:49 PM Sep 28, 2019 | Sriram |

ಮಂಗಳೂರು: ಭಕ್ತರ ಪಾಲಿನ ಇಷ್ಟಾರ್ಥ ದೇವತೆ ಎನಿಸಿಕೊಂಡಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ವಿಶೇಷ ಪೂಜೆಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ.

Advertisement

ಈ ಬಾರಿಯ ನವರಾತ್ರಿ ಉತ್ಸವವು ಸೆ. 29ಕ್ಕೆ ಆರಂಭಗೊಳ್ಳಲಿದ್ದು, ಪ್ರತಿದಿನ ಚಂಡಿಕಾ ಹೋಮ, ರಾತ್ರಿ ನವರಾತ್ರಿ ಪೂಜೆ ನಡೆಯುತ್ತದೆ. ಚಂಡಿಕಾ ಹೋಮವು ಪ್ರತಿದಿನ ಹರಕೆಯ ರೂಪದಲ್ಲಿ ನಡೆದರೆ, ಅ. 6ರಂದು ಕ್ಷೇತ್ರದ ವತಿಯಿಂದ ಜರಗಲಿದೆ.

ತಾಯಿಯ ಪುಣ್ಯಕ್ಷೇತ್ರದಲ್ಲಿ ವೇಷಗಳ ಜಳಕ ಅತ್ಯಂತ ವಿಶೇಷವಾಗಿದೆ. ಅ. 6ರಂದು ನವರಾತ್ರಿ ಪೂಜೆ ಸಂಪನ್ನಗೊಳ್ಳಲಿದ್ದು, ಅ. 7ರಂದು ಆಯುಧ ಪೂಜೆ ನಡೆಯುತ್ತದೆ. ಪೂಜೆ ಸಂದರ್ಭದಲ್ಲಿ ನವಮಿ ಬರಬೇಕಿರುವುದರಿಂದ ಈ ಬಾರಿ 8 ಪೂಜೆ ಮಾತ್ರ ಇರುತ್ತದೆ. ನವರಾತ್ರಿ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪ್ರತಿದಿನವೂ ಭಕ್ತರ ಸಂಖ್ಯೆ ಅಧಿಕವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next