ನವಿಮುಂಬಯಿ: ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನವಿಮುಂಬಯಿ ಇದರ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಡಿ. 24ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಧಾರ್ಮಿಕ ಸಭಾ ಮಂಟಪದಲ್ಲಿ ವಿಜೃಂಭಣೆಯಿಂದ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಿಂದ ಮಹಾಗಣಪತಿ ಹೋಮ, ಆ ಬಳಿಕ ಅಯ್ಯಪ್ಪ ಸ್ವಾಮಿಯ ವ್ರತಾಚರಣೆಗೈದು ಶಬರಿಮಲೆ ಯಾತ್ರೆ ಮಾಡಲಿರುವ ಅಯ್ಯಪ್ಪ ಸ್ವಾಮಿಗಳಿಂದ ಹಾಗೂ ಅಯ್ಯಪ್ಪ ಭಕ್ತರಿಂದ ಶ್ರೀ ಅಯ್ಯಪ್ಪ ಸ್ವಾಮಿ ಸಹಸ್ರನಾಮಾರ್ಚನೆ ನಡೆಯಿತು. ಸಾಯಂಕಾಲ ಕಲಶ ಪ್ರತಿಷ್ಠೆ, ಶ್ರೀ ಶನೀಶ್ವರ ಮಂದಿರ ಭಜನ ಮಂಡಳಿ ಸದಸ್ಯರಿಂದ ವಿವಿಧ ಭಜನೆ, ಆ ಬಳಿಕ ಅನಿಲ್ ಹೆಗ್ಡೆ ಗುರುಸ್ವಾಮಿ ಅವರಿಂದ ಪುಷ್ಪಾಲಂಕೃತ ಶ್ರೀ ಅಯ್ಯಪ್ಪ ಸ್ವಾಮಿಯ ಮಂಟಪಕ್ಕೆ ಮಹಾಆರತಿ ನಡೆಯಿತು. ಮಹಾಪೂಜೆಯ ಅನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ನೆರೂಲ್ ಶ್ರೀ ಧರ್ಮಶಾಸ್ತ ಭಕ್ತವೃಂದದ 25ನೇ ಬಾರಿಗೆ ಶಬರಿಮಲೆ ಯಾತ್ರೆ ಮಾಡುತ್ತಿರುವ ಸುರೇಶ್ ಶೆಟ್ಟಿ ಸೀತಾನದಿ ಅವರನ್ನು ಶಾಲು ಹೊದೆಸಿ, ಮಹಾಪ್ರಸಾದ ನೀಡಿ ಗೌರವಿಸಲಾಯಿತು. ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ನೆರೂಲ್ ಶ್ರೀ ಮಹಾಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಮೀರಾ ತಾಯಿ ಪಾಟೀಲ್, ಅಲ್ಲದೆ ಪರಿಸರದ ಉದ್ಯಮಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾವಿರಾರು ಮಂದಿ ಅಯ್ಯಪ್ಪ ಭಕ್ತರು ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು.
ರವಿಶಂಕರ್ ಆಚಾರ್ಯ ಹಾಗೂ ಗುರುಸ್ವಾಮಿ ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು ಅವರು ಅಯ್ಯಪ್ಪ ಸ್ವಾಮಿಯ ಮಂಟಪದ ಅಲಂಕಾರವನ್ನು ಮಾಡಿದ್ದರು. 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಯಶಸ್ವಿಯಾಗಿ ಜರಗಲು ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ. ಶೆಟ್ಟಿ, ಗೌರವ ಕೋಶಾಧಿಕಾರಿ ವಿ. ಕೆ. ಸುವರ್ಣ ಹಾಗೂ ವಿಶ್ವಸ್ಥರಾದ ರಮೇಶ್ ಎಂ. ಪೂಜಾರಿ, ಅದ್ಯಪಾಡಿಗುತ್ತು ಕರುಣಾಕರ ಎಸ್., ಅನಿಲ್ ಕುಮಾರ್ ಹೆಗ್ಡೆ, ಕೃಷ್ಣ ಎಂ. ಪೂಜಾರಿ, ಎನ್. ಕೆ. ಪೂಜಾರಿ, ಗಿರೀಶ್ ಸಿ. ಶೆಟ್ಟಿ, ವಿಜಯ್ ಶೆಟ್ಟಿ, ವಿನೋದ್ ರಾವ್, ಉಪ ಸಮಿತಿಯ ಮುಖ್ಯಸ್ಥ ಸತೀಶ್ ಶ್ರೀಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಸುಪ್ರಿಯಾ ಅನಿಲ್ ಹೆಗ್ಡೆ, ಸರ್ವ ಸದಸ್ಯರು ಮತ್ತು ಸ್ವಾಮಿಗಳು, ಮಹಿಳಾ ಸದಸ್ಯೆಯರು ಶ್ರೀ ಶನೀಶ್ವರ ಸೇವಾ ಸಮಿತಿಯ ವಿಶ್ವಸ್ಥ ಮಂಡಳಿಯವರು, ದೇವಸ್ಥಾನದ ಪ್ರಬಂಧಕ ದಯಾನಂದ್ ಶೆಟ್ಟಿಗಾರ್ ಮತ್ತು ನೌಕರ ವೃಂದದವರು ಸಹಕರಿಸಿದರು.