ಕಲಬುರಗಿ: ಜಿಲ್ಲಾ ಯುವ ರೆಡ್ಡಿ ಸಮಾಜದ ವತಿಯಿಂದ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಶ್ರಾವಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಹಾಗೂಮಹಾಯೋಗಿ ವೇಮನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಹರಿಹರ ತಾಲೂಕು ಎರೆಹೊಸಹಳ್ಳಿ ವೇಮನಾನಂದ ಪೀಠದ ವೇಮನಾನಂದ ಸ್ವಾಮಿಜೀ ಮಾತನಾಡಿ, ಜಿಲ್ಲೆಯ ವಿವಿಧ
ತಾಲೂಕಿನಲ್ಲಿ ಶ್ರಾವಣಮಾಸದ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೆಡ್ಡಿ ಸಮುದಾಯದವರಿಗೆ ಶ್ರಾವಣದ ವಿಶೇಷ ಸಂದೇಶ ನೀಡಬೇಕು. ಸಂಘಟನೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಹೇಳಿದರು.
ಬೆಂಗಳೂರಿನ ಅಖೀಲ ಕರ್ನಾಟಕ ರೆಡ್ಡಿ ಜನಸಂಘದ ಜಂಟಿ ಕಾರ್ಯದರ್ಶಿ ಶೇಖರ ರೆಡ್ಡಿ, ಜಿಲ್ಲಾ ರೆಡ್ಡಿ ಸಮಾಜದ ಯುವ ಘಟಕದ ಅಧ್ಯಕ್ಷ ವಿಜಯ ರೆಡ್ಡಿ, ಅಖೀಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಡಾ| ವಿಶಾಲಾಕ್ಷಿ ಕರಡ್ಡಿ, ಜಿಪಂ ಮಾಜಿ ಸದಸ್ಯ ಮಧುಸೂದನರೆಡ್ಡಿ ಮಾಲಿಪಾಟೀಲ ಮುಧೋಳ, ಗಿರೀಶ ಪಾಟೀಲ ರಾಯಚೂರು, ಶಂಕರರೆಡ್ಡಿ ಬೀದರ್, ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ ಶೇರಿಕಾರ ವೇದಿಕೆಯಲ್ಲಿದ್ದರು.
ಹಿರಿಯರಾದ ಶರಣರೆಡ್ಡಿ ಜಿಲ್ಲೇಡಪಲ್ಲಿ, ಆರ್.ಪಿ. ಪಾಟೀಲ, ಪ್ರೊ| ಎಸ್.ಎಲ್.ಪಾಟೀಲ, ಭೀಮರೆಡ್ಡಿ ಕುರಾಳ ಚಿತ್ತಾಪುರ, ಶಿವಶಾಂತರೆಡ್ಡಿ ಮುನ್ನಹಳ್ಳಿ ಸಲಹೆ ನೀಡಿದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ಸೇಡಂ ಯುವ ರೆಡ್ಡಿ ಸಮಾಜದ ಅಧ್ಯಕ್ಷ ಶಿವಲಿಂಗರೆಡ್ಡಿ ಅವರನ್ನು ಪೂಜ್ಯ ಶ್ರೀ
ವೇಮನಾನಂದ ಸ್ವಾಮೀಜಿ ಸತ್ಕರಿಸಿದರು. ವಿಶ್ವ ಕಾಮರೆಡ್ಡಿ ನಿರೂಪಿಸಿದರು. ಸತೀಶರೆಡ್ಡಿ ಮೋತಕಪಲ್ಲಿ ವಂದಿಸಿದರು.