Advertisement

ಬಾಂಗ್ಲಾದಲ್ಲೂ ಶ್ರದ್ಧಾ ಮಾದರಿ ಹತ್ಯೆl ಕತ್ತು ಹಿಸುಕಿ ಕೊಲೆ ಮಾಡಿದ, ಕೈ ತುಂಡರಿಸಿ ಚರಂಡಿಗೆ ಎಸೆದ

11:21 PM Nov 18, 2022 | Team Udayavani |

ಢಾಕಾ/ಲಕ್ನೋ: ಹೊಸದಿಲ್ಲಿಯಲ್ಲಿ ಶ್ರದ್ಧಾ ವಾಕರ್‌ ಎಂಬಾಕೆಯನ್ನು 35 ತುಂಡು ಮಾಡಿ ಹತ್ಯೆ ಮಾಡಿದ ಪ್ರಕರಣ ಹಸುರಾಗಿ ಇರುವಾಗಲೇ ಅದೇ ಮಾದರಿಯ ಪ್ರಕರಣ ಬಾಂಗ್ಲಾದೇಶದಲ್ಲಿ ನಡೆದಿದೆ. ನ.6ರಂದು ಕವಿತಾ ರಾಣಿ ಎಂಬ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯನ್ನು ಅಬು ಬಕ್‌ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಮತ್ತು ಆಕೆಯ ದೇಹವನ್ನು ತುಂಡು ತುಂಡು ಮಾಡಿದ್ದಾನೆ. ಇಂಥ ಕೃತ್ಯವನ್ನು ಎಸಗಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕುತೂಹಲಕಾರಿ ಅಂಶ ವೆಂದರೆ ಐದು ದಿನಗಳ ಹಿಂದಷ್ಟೇ ಅಬು ಬಕ್‌Åಗೆ ಕವಿತಾ ಪರಿಚಯವಾಗಿದ್ದಳು. ನ.6ರಂದು ಆತನ ಆಹ್ವಾನದ ಮೇರೆಗೆ ಕವಿತಾ ಮನೆಗೆ ತೆರಳಿದ್ದಳು. ಅಲ್ಲಿ ಆತನಿಗೂ ಕವಿತಾಗೂ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಂತಿಮವಾಗಿ ಆತ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅನಂತರ ರುಂಡವನ್ನು ಮುಂಡದಿಂದ ಬೇರ್ಪಡಿಸಿದ್ದಾನೆ. ಆಕೆಯ ಕೈಯ್ಯನ್ನು ಕಡಿದು ತುಂಡು ಮಾಡಿ ಚರಂಡಿಯಲ್ಲಿ ಎಸೆದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಅಬು ಬಕ್‌ ಕೆಲಸಕ್ಕೆ ಬಾರದೇ ಇದ್ದುದರ ಬಗ್ಗೆ ಸಂಶಯಗೊಂಡು ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನ.7ರಂದು ಪೊಲೀಸರು ಶೋಧ ನಡೆಸಿದಾಗ ಆತ ಮತ್ತೂಬ್ಬ ಯುವತಿ ಸಪ್ನಾ ಎಂಬಾಕೆಯ ಜತೆಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ರುಂಡವಿಲ್ಲದ ದೇಹ ಬಾಕ್ಸ್‌ ಒಂದರಲ್ಲಿ ಪತ್ತೆಯಾಗಿತ್ತು.

ಗುಂಡು ಹಾರಿಸಿ ಬಂಧನ
ಕೆಲವು ದಿನಗಳ ಹಿಂದೆ ಮುಸ್ಲಿಂಗೆ ಮತಾಂತರವಾಗಲು ನಿರಾಕರಿಸಿದ್ದ ಹಿಂದೂ ಯುವತಿಯನ್ನು ಕಟ್ಟಡದಿಂದ ತಳ್ಳಿ ಸಾಯಿಸಿದ್ದ ಸುಫಿಯಾನ್‌ ಎಂಬಾತನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋ ಸಮೀಪದ ಪೊಲೀಸರಿಗೂ ಸುಫಿಯಾನ್‌ಗೂ ಗುಂಡಿನ ಚಕಮಕಿ ನಡೆದಿದೆ. ಆತನ ಬಗ್ಗೆ ಸುಳಿವು ಸಿಕ್ಕ ಪೊಲೀಸರ ತಂಡ ಲಕ್ನೋದ ದುಬಗ್ಗಾ ಎಂಬಲ್ಲಿ ಶೋಧ ನಡೆಸುತ್ತಿತ್ತು. ಆಗ ಆತ ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತೀಯಾಗಿ ಗುಂಡು ಹಾರಿಸಿದಾಗ ಬಲದ ಕಾಲಿಗೆ ಗುಂಡು ತಾಗಿ, ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next