Advertisement

ಬಿಜೆಪಿ ಗೆಲ್ಲಿಸಲು ಒಗ್ಗಟ್ಟು ತೋರಿಸಿ

12:44 PM Feb 21, 2018 | |

ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ತಲೆ ಎತ್ತದಂತಹ ಪರಿಸ್ಥಿತಿ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ವಿಜಯನಗರ ಹಾಗೂ ಗೋವಿಂದರಾಜ ನಗರ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ತಿಳಿಸಿದರು.

Advertisement

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ಸಿದ್ಧಾರ್ಥ ಹಾಗೂ ಯುವರಾಜು ಅವರಿಗೆ ಪಕ್ಷದ ಬಾವುಟ ಹಾಗೂ ಶಾಲು ಹೊದಿಸಿ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಎಲ್ಲ ವಾರ್ಡ್‌ಗಳಲ್ಲಿ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದಾರೆ. ಅದೇ ರೀತಿ ಈ ಎರಡು ವಿಧಾನಸಭಾ ಕ್ಷೇತ್ರದಲ್ಲಿಯೂ ಗೆಲ್ಲಬೇಕಿದೆ ಎಂದರು. 

ಗೂಂಡಾಗಳು: ಕಾಂಗ್ರೆಸ್‌ನ ಗೂಂಡಾಗಳು ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದಾರೆ. ಜತೆಗೆ ಅವರಿಗೆ ಕಾಂಗ್ರೆಸ್‌ ಬೆಂಬಲಿಸುತ್ತಿದೆ ಎಂದು ಹೇಳಿದಾಗ ಯಾರೂ ನಂಬಲಿಲ್ಲ. ಇದೀಗ ಕಾಂಗ್ರೆಸ್‌ ಗೂಂಡಾಗಳು ಸಾರ್ವಜನಿಕರನ್ನು ಹೊಡೆಯುತ್ತಿದ್ದು, ಬೆಂಗಳೂರು ಗೂಂಡಾ ನಗರವಾಗುತ್ತಿದೆ.

ನಗರದ ಶಾಂತಿನಗರದಲ್ಲಿಯೇ ಅಶಾಂತಿ ನೆಲೆಸಿದ್ದು, ಹ್ಯಾರೀಸ್‌ ಪುತ್ರನ ರೌಡಿಸಂ ಬೆಳಕಿಗೆ ಬಂದಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಗೂಂಡಾಗಳು ಅವರೊಂದಿಗೆ ಬರುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಒಂದು ಸೀಟು ಗೆಲ್ಲಲು ಬಿಡಬಾರದು ಎಂದರು.

30 ಪರ್ಸೆಂಟ್‌: ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಸರ್ಕಾರ 30 ಪರ್ಸೆಂಟ್‌ ಸರ್ಕಾರವಾಗಿದ್ದು, ಮೋದಿಯವರು 10 ಪರ್ಸೆಂಟ್‌ ಎಂದು ಕಡಿಮೆ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿ  30 ಪರ್ಸೆಂಟ್‌ ನೀಡದಿದ್ದರೆ ಯಾವುದೇ ಕೆಲಸವಾಗುವುದಿಲ್ಲ. ಬಿಬಿಎಂಪಿ ಅಧಿಕಾರಿ 30 ಪರ್ಸೆಂಟ್‌ ಲಂಚ ಕೇಳಿದ ಎಂದು ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷನೇ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದು, ಇದು ಪಸೆಂಟ್‌ ಸರ್ಕಾರ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಟೀಕಿಸಿದರು. 

Advertisement

ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಸದಾಶಿವ, ರಾಜ್ಯ ಘಟಕ ಖಜಾಂಚಿ ಸುಬ್ಬಣ್ಣ, ಪಾಲಿಕೆ ಸದಸ್ಯರಾದ ಉಮೇಶ್‌ ಶೆಟ್ಟಿ, ಡಾ.ರಾಜು, ಶಾಂತಕುಮಾರಿ, ಡಾ.ರಾಜು, ದಾಸೇಗೌಡ, ಮೋಹನ್‌ ಕುಮಾರ್‌ ಇದ್ದರು. 

ಅಪ್ಪ-ಮಕ್ಕಳು ಬಿಜೆಪಿಗೆ ಬರುತ್ತಾರೆ ಎಂದು ಹೇಳಲಾಗುತ್ತಿದ್ದು, ಅದು ಬಿಜೆಪಿ ಕಾರ್ಯಕರ್ತರು ಒಗ್ಗೂಡಬಾರದು ಎಂಬ ಉದ್ದೇಶದಿಂದ ಅವರು ಮಾಡುತ್ತಿರುವ ಸ್ಟಂಟ್‌. ಜತೆಗೆ ಕೆಲವೊಂದು ಗುಸುಗಸುಗಳು ಕೇಳಿಬರುತ್ತಿದ್ದು, ಒಮ್ಮೆ ರಣರಂಗಕ್ಕೆ ಇಳಿದ ನಂತರ ಹಿಂದೆ ಹೋಗಲು ಸೋಮಣ್ಣ ಹೇಡಿಯಲ್ಲ. ನನ್ನ ನಂಬಿ ಪಕ್ಷಕ್ಕೆ ಬಂದಿರುವವರಿಗೆ ಪಕ್ಷ ಎಲ್ಲವನ್ನೂ ನೀಡಲಿದೆ.
-ವಿ. ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ 

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಡಲಾಗುವುದು. ಗೋವಿಂದರಾಜನಗರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ವಿ.ಸೋಮಣ್ಣ  ಆಗಬೇಕು ಎಂಬುದು ಸದ್ಯ ಸೇರ್ಪಡೆಗೊಂಡಿರುವವರ ಆಶಯ. 
-ಸಿದ್ಧಾರ್ಥ, ಬಿಜೆಪಿ ಸೇರಿದವರು.

Advertisement

Udayavani is now on Telegram. Click here to join our channel and stay updated with the latest news.

Next