Advertisement

ನಿತ್ಯ ಪರಿಸರ ಕಾಳಜಿ ತೋರಿಸಿ: ಸತೀಶ್‌

04:56 AM Jun 06, 2020 | Lakshmi GovindaRaj |

ಭಾರತೀನಗರ: ಗಿಡ ನೆಡುವುದು, ಪರಿಸರದ ಬಗ್ಗೆ ಮಾತನಾಡು ವುದು, ಜಾಗೃತಿ ಮೂಡಿಸುವುದು ಕೇವಲ ವಿಶ್ವ ಪರಿಸರ ದಿನಾ ಚರಣೆಗೆ ಸೀಮಿತವಲ್ಲ. ನಿತ್ಯ ಪರಿಸರ ದಿನಾಚರಣೆ ಎಂದು ಭಾವಿಸಿ ಪರಿಸರದ ಬಗ್ಗೆ ಕಾಳಜಿ ತೋರಬೇಕು  ಎಂದು ಅಖೀಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್‌ ತಿಳಿಸಿದರು.

Advertisement

ಮದ್ದೂರು ತಾಲೂಕಿನ ತೊರೆಚಾಕನ ಹಳ್ಳಿಯ ಸ್ಮಶಾನ ಭೂಮಿಯಲ್ಲಿ ವಿಶ್ವಪರಿಸರ ದಿನಾಚರಣೆ ಅಂಗ ವಾಗಿ ಅಖೀಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಹಾಗೂ ಕ್ಯಾತಘಟ್ಟ ಗ್ರಾಪಂನಿಂದ ನಡೆದ ಗಿಡನೆಡುವ ಕಾರ್ಯ ಕ್ರಮದಲ್ಲಿ ಮಾತನಾಡಿ, ಭವಿಷ್ಯದ ಜನರಿ ಗಾಗಿ ಎಲ್ಲರೂ ಪರಿಸರ ಸಂರಕ್ಷಣೆ ಮಾಡ ಬೇಕು. ಪ್ರತಿಯೊ ಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು.

ಪರಿಸರ ಸಂರಕ್ಷಣೆಗೆ ಎಲ್ಲರ ಕರ್ತವ್ಯ. ಆದ್ದರಿಂದ ಜನರು ಸರ್ಕಾರ ದೊಂದಿಗೆ ಕೈಜೋಡಿಸಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇ ಗೌಡ ಮಾತನಾಡಿ, ಅಭಿವೃದ್ದಿ ಹೆಸರಿ ನಲ್ಲಿ ಪ್ರಕೃತಿ ನಾಶ ವಾಗುತ್ತಿದೆ.  ರಾಸಾಯನಿಕ ಗೊಬ್ಬರ ಬಳಕೆ, ಪ್ಲಾಸ್ಟಿಕ್‌ನಿಂದ ಪರಿಸರ ಹಾಳಾ ಗುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದರು. ಕ್ಯಾತಘಟ್ಟ ಗ್ರಾಪಂ ಕಾರ್ಯದರ್ಶಿ ರಾಘ ವೇಂದ್ರ ಮಾತನಾಡಿ, ಪರಿಸರ ಜಾಗೃತಿ ವೇದಿಕೆ ವರ್ಷವೀಡಿ ಉತ್ತಮ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಅಖೀಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಪದಾಧಿಕಾರಿಗಳಾದ ತೊರೆಬೊಮ್ಮನಹಳ್ಳಿ ನಂದೀಶ್‌, ಎಚ್‌.ಹೊಸಹಳ್ಳಿ ಶಿವಕುಮಾರ್‌, ಕರಡಕೆರೆ ಯೋಗೇಶ್‌, ಕೆ.ಎಂ.ದೊಡ್ಡಿ ರಘು, ಗೌಡಯ್ಯನದೊಡ್ಡಿ ಬಲ್ಲೇಗೌಡ, ಮುತ್ತು  ರಾಜು, ಗ್ರಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ರಾಘವೇಂದ್ರ, ಮಲ್ಲೇಗೌಡ, ಸುರೇಶ್‌, ಶಿವರಾಮು ಸೇರಿದಂತೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next