Advertisement

ಕೋವಿಡ್  ತಡೆಗೆ ದೇವರಿಗೆ ಮೊರೆ

01:01 PM Apr 25, 2021 | Team Udayavani |

ಅಥಣಿ: ದೇಶದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿಹಬ್ಬತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನುತಡೆಗಟ್ಟಲು ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರಮೊರೆ ಹೋಗಿದ್ದಾರೆ.

Advertisement

ಕೃಷ್ಣಾ ನದಿಯಿಂದ ಮಡಿಯಿಂದನೀರು ತಂದು ದೇವರಿಗೆ ಜಲ ಅಭಿಷೇಕ ನೆರವೇರಿಸಿ,ದೇವರಲ್ಲಿ ಕೊರೊನಾ ಮಹಾಮಾರಿ ತಡೆಗಟ್ಟಲುಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ.

ನಾಲ್ಕು ಕಿಮೀದೂರದ ನದಿಯಿಂದ ಪಾದಯಾತ್ರೆ ಮುಖಾಂತರಗ್ರಾಮದಲ್ಲಿ ಇರುವಂತಹ ದರ್ಗಾ, ದೇವಸ್ಥಾನಗಳಿಗೆಜಲ ಅಭಿಷೇಕ ಮಾಡುವ ಮೂಲಕ ಭಕ್ತಿ ಪರಾಕಾಷ್ಠೆಮೆರೆದಿದ್ದಾರೆ.ಶತಮಾನಗಳ ಹಿಂದೆ ಗ್ರಾಮಗಳಲ್ಲಿ ಮಹಾಮಾರಿರೋಗಗಳು ಕಾಣಿಸಿದಾಗ ಐದು ವಾರಗಳ ಕಾಲ ಒಂದುದಿನವನ್ನು ನಿಗದಿ ಪಡಿಸಿ ದೇವರಿಗೆ ಜಲ ಅಭಿಷೇಕಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು.

ಇದರಿಂದಾಗಿಊರಿನಲ್ಲಿ ರೋಗಗಳು ಕಡಿಮೆಯಾಗುತ್ತವೆಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ. ನಾವುಕೂಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆಮುಂದಾಗಿದ್ದೆವೆಂದು ಗ್ರಾಮಸ್ಥೆ ದಾನವ್ವ ನಂದಗಾಂವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next