ಬೆಂಗಳೂರು: ಕುವೆಂಪು ಅವರ ರಾಮಾಯಣ ದರ್ಶನಂ ಬಿಟ್ಟು, ಪೆರಿಯಾರ್ ಪಠ್ಯ ನೀಡಲು ಹೊರಟಿದ್ದರು. ಕುವೆಂಪು ಅವರು ರಾಮನನ್ನು ಹೀರೋ ಮಾಡಿದ್ದರು ಆದರೆ, ಪೆರೆಯಾರ್ ರಾವಣನನ್ನು ಹೀರೋ ಮಾಡಲು ಹೊರಟಿದ್ದರು. ನಾವು ರಾವಣನನ್ನು ಹೀರೋ ಮಾಡಿರುವ ಪಠ್ಯ ಓದಬೇಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ನೀವು ಯಾವ ವಿಚಾರವಾಗಿ ಹೋರಾಟ ಮಾಡುತ್ತಿದ್ದೀರಿ? ನಾರಾಯಣ ಗುರು ಅವರ ಪಠ್ಯ ಕೈಬಿಟ್ಟಿಲ್ಲ, ಬಸವಣ್ಣನವರ ಪಾಠ ಇದೆ. ಕುವೆಂಪು ಅವರ ಪಠ್ಯಕ್ಕೆ ಹೆಚ್ಚುವರಿಯಾಗಿ ಎರಡು ಪ್ಯಾರಾ ಸೇರಿಸಲಾಗಿದೆ. ಇದು ತಪ್ಪೇ ಎಂದು ಪ್ರಶ್ನಿಸಿದರು.
ಸಿಎಂ ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಮುಡಂಬಡಿತ್ತಾಯ, ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಪಾಠವನ್ನು ಪಬ್ಲಿಕ್ ಡೊಮೈನ್ ಗೆ ಹಾಕಿದ್ದಾರೆ. ಜನರು ಓದಿ ಯಾವುದು ಬೇಕೆಂದು ತೀರ್ಮಾನ ಮಾಡಲಿ. ಪಠ್ಯ ಬದಲಿಸಿ ಎಂದರೆ ಬದಲಿಸಲು ಸಿದ್ದ ಎಂದೂ ತಿಳಿಸಿದ್ದೇವೆ. ದೇವೇಗೌಡರು, ಡಿ.ಕೆ ಶಿವಕುಮಾರ್ ಎಲ್ಲರೂ ಪೂಜೆ ಮಾಡೋದು ರಾಮನನ್ನೇ. ಆದರೆ ಈಗ ರಾವಣನನ್ನು ಹೀರೋ ಮಾಡಲು ಹೊರಟರೆ ನಾವು ಏನು ಮಾಡುವುದು ಎಂದು ಸಿ.ಟಿ ರವಿ ಹೇಳಿದರು.