Advertisement

ಭಾರತದ ಭವಿಷ್ಯಕ್ಕಾಗಿ ಗುರುಕುಲ ಶಿಕ್ಷಣ ನೀಡಬೇಕು: ಹಿಂದೂ ರಾಷ್ಟ್ರ ಸಂಸತ್

02:15 PM Jun 18, 2022 | Team Udayavani |

ಪಣಜಿ: ಭಾರತದ ಉಜ್ವಲ ಭವಿಷ್ಯಕ್ಕಾಗಿ ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು, ಧರ್ಮಾಧಿಷ್ಠಿತ ಗುರುಕುಲ ಶಿಕ್ಷಣವನ್ನು ನೀಡಬೇಕು, ಎಂಬ ಠರಾವನ್ನು ಮೂರನೇ ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.

Advertisement

ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ಆಯೋಜಿಸಿದ್ದ ಮೂರನೇಯ ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಹಿಂದೂ ಶೈಕ್ಷಣಿಕ ನೀತಿಯನ್ನು ಹೇಗೆ ಒಪ್ಪಿಕೊಳ್ಳಬೇಕು, ಎಂಬ ವಿಷಯದ ಕುರಿತಾದ ಕಲಾಪ ಸಂಸತ್ತಿನ ಸಭಾಪತಿ  ನೀರಜ ಅತ್ರಿ, ಉಪಸಭಾಪತಿ ಸದ್ಗುರು ಡಾ.ಚಾರುದತ್ತ ಪಿಂಗಳೆ ಮತ್ತು ಕಾರ್ಯದರ್ಶಿ ಎಂದು  ಶಂಭು ಗವಾರೇ ಇವರು ನಡೆಸಿದರು.ಜೀವನದಲ್ಲಿ ಆತ್ಮಬಲ ಮತ್ತು ಚಾರಿತ್ರ್ಯವನ್ನು ಮೂಡಿಸುವ ಶಿಕ್ಷಣವೇ ನಿಜವಾದ ಶಿಕ್ಷಣವಾಗಿದೆ ! ತದ್ವಿರುದ್ಧ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುರುಕುಲ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಇರುವುದರಿಂದ ಕುಟುಂಬ ಭಾವನೆ ಮೂಡುತ್ತಿತ್ತು. ಭಾರತೀಯ ಶಿಕ್ಷಣ ವ್ಯವಸ್ಥೆಯು ಆಚಾರ್ಯಮೂಲ, ಜ್ಞಾನಮೂಲ, ವಸುಧೈವ ಕುಟುಂಬಕಂ ಎಂಬ ಭಾವವನ್ನು ನಿರ್ಮಿಸುವುದಾಗಿತ್ತು. ಈ ಶಿಕ್ಷಣದ ಮೂಲಕ ನಡೆಯುವ ಆಧ್ಯಾತ್ಮಿಕ ಕ್ರಾಂತಿಯು ಜಗತ್ತಿಗೆ ಮಾರ್ಗದರ್ಶಿಯಾಗಲಿದೆ ಎಂಬ ಅಭಿಪ್ರಾಯ ವ್ಯಕತವಾಯಿತು.

ಸರ್ವೋಚ್ಚ ನ್ಯಾಯಾಲಯವು ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಮಾನ್ಯತೆಯನ್ನು ನೀಡಲು ನಿರಾಕರಿಸಿದ್ದರಿಂದ ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲು ಅಯೋಗ್ಯವಾಗಿದೆ, ಇಂತಹ ಪ್ರಸ್ತಾವನೆಯನ್ನು ಈ ಸಂಸತ್ತಿನಲ್ಲಿ ವಿರೋಧಿ ಪಕ್ಷದ ಸದಸ್ಯರು ಮಂಡಿಸಿದಾಗ ಅದನ್ನು ಖಂಡಿಸಿದ  ರಮೇಶ ಶಿಂಧೆ , ಶಾಹಬಾನೊ ಖಟ್ಲೆಯಲ್ಲಿ ಮುಸಲ್ಮಾನರ ಓಲೈಕೆಗಾಗಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಆಗಿನ ಸಂಸತ್ತು ಬದಲಾಯಿತು. ಆದುದರಿಂದ ಬಹುಸಂಖ್ಯಾತ ಹಿಂದೂಗಳು ಶ್ರೀಮದ್ ಭಗವದ್ಗೀತೆಯನ್ನು ಕಲಿಯಲು ಬಯಸಿದರೆ ಅಂತಹ ಠರಾವನ್ನು ಅಂಗೀಕರಿಸುವ ಹಕ್ಕು ಸಾರ್ವಭೌಮ ಸಂಸತ್ತಿಗೆ ಇದೆ ಎಂದು ಹೇಳಿದರು.

ವಿರೋಧಿ ಪಕ್ಷದ ಸದಸ್ಯರೊಬ್ಬರು, ಶಿಕ್ಷಣದಲ್ಲಿ ಇತರ ಭಾಷೆಗಳ ಜೊತೆಗೆ ಆಂಗ್ಲವನ್ನೂ ಕಲಿಸುವುದು ಅಗತ್ಯವಾಗಿದೆ ! ಎಂದು ಹೇಳಿದ ಪ್ರಸ್ತಾಪನೆಯನ್ನು ಖಂಡಿಸಿದ  ರಮೇಶ ಶಿಂದೆ ಇವರು, ನಮ್ಮಲ್ಲಿ ಜನನದ ನಂತರದಿಂದ ಮಾತ್ರವಲ್ಲದೇ ಮಹಾಭಾರತ ಕಾಲದಲ್ಲಿ ಅಭಿಮನ್ಯುವು ಗರ್ಭದಲ್ಲಿ ಜ್ಞಾನ ಪಡೆದ ಉದಾಹರಣೆ ನಮ್ಮ ಮುಂದಿದೆ. ಹಾಗಾಗಿ ಮಾತೃಭಾಷೆಗೆ ಗರ್ಭದಲ್ಲಿ ಜ್ಞಾನ ನೀಡುವ ಶಕ್ತಿ ಇರುವಾಗ ಆ ಸ್ಥಳದಲ್ಲಿ ಆಂಗ್ಲ ಶಿಕ್ಷಣದ ಅಗತ್ಯ ಏನಿದೆ ? ಬ್ರಿಟಿಷರ ಆಳ್ವಿಕೆಗೆ ಒಳಗಾದ ಹಲವು ದೇಶಗಳು ಈಗ ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಭಾರತ ಯಾವಾಗ ಈ ಗುಲಾಮಗಿರಿಯಿಂದ ಹೊರಬರುವುದು ? ಆದ್ದರಿಂದ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಮಾತೃಭಾಷೆಯನ್ನು ಕಲಿಸಬೇಕು’ ಎಂದು ಹೇಳಿದರು.

ಅಭಯ ಭಂಡಾರಿ ಅವರು ಮಂಡಿಸಿದ, ಶಿಕ್ಷಕರನ್ನು ನೇಮಕ ಮಾಡುವಾಗ ಕೇವಲ ಶೈಕ್ಷಣಿಕ ಮೌಲ್ಯವನ್ನು ನೋಡದೆ, ಶುದ್ಧ ಚಾರಿತ್ರ್ಯದ ಶಿಕ್ಷಕರೂ ಬೇಕು ! ಈ ಪ್ರಸ್ತಾಪನೆಯನ್ನು ಅಂಗೀಕರಿಸಿದ ಉಪಸಭಾಪತಿ ಸದ್ಗುರು ಡಾ.ಚಾರುದತ್ತ ಪಿಂಗಳೆಯವರು, ಪ್ರಸ್ತುತ ಸ್ಥಿತಿಯಲ್ಲಿ ಹಣ ಕೊಟ್ಟು ಶಿಕ್ಷಕರನ್ನು ನೇಮಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿಷಯ ಸರಿಯಾಗಿ ಅರ್ಥವಾಗದೆ ಹರಟೆ ಹೊಡೆಯುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ಹೇಳಿದರು. ಸಂಸತ್ತಿನ ವಿಶೇಷ ಸಮಿತಿಯ ಸದಸ್ಯರಾದ ನ್ಯಾಯವಾದಿ ಉಮೇಶ ಶರ್ಮಾ ಇವರು ಮಾತನಾಡುತ್ತಾ, ಆಂಗ್ಲವು ಕೇವಲ ಭಾಷೆಯೇ ಹೊರತು ಜ್ಞಾನವಲ್ಲ ! ಭಾರತದ ಪ್ರತಿಯೊಂದು ಪ್ರಾದೇಶಿಕ ಭಾಷೆಯು ಸಮೃದ್ಧವಾಗಿದ್ದು ಆಂಗ್ಲ ಕಲಿಸುವ ಅಗತ್ಯವಿಲ್ಲ ಎಂದು ಹೇಳಿದರು. ಈ ಸಮಯದಲ್ಲಿ ಅಂಗೀಕರಿಸಲಾದ ಠರಾವಿನಲ್ಲಿ ಭಾರತೀಯ ಸಂಸ್ಕøತಿಯೊಂದಿಗೆ ಸಂಬಂಧವಿಲ್ಲದಿರುವ ಹಬ್ಬಗಳನ್ನು ಶಾಲೆಗಳಲ್ಲಿ ಆಚರಿಸಬಾರದು, ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಬೇಕು, ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯನ್ನು ಕಲಿಸಬೇಕು, ಇವುಗಳೊಂದಿಗೆ ಇತರ ಠರಾವುಗಳು ಸಹ ಇದ್ದವು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next