ವರ್ತಕ ಕೆ.ಬೋಪಣ್ಣ ಗುಂಡಿನ ದಾಳಿಯಿಂದ ಪಾರಾದವರಾಗಿದ್ದು, ಆರೋಪಿ ಎನ್.ರಂಜನ್ ಚಿಣ್ಣಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಅಮ್ಮತ್ತಿಯ ಸಿದ್ದಾಪುರ ರಸ್ತೆಯಲ್ಲಿರುವ ರಂಜನ್ ಚಿಣ್ಣಪ್ಪ ಅವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ಕಳೆದ 8 ವರ್ಷಗಳಿಂದ ಬೋಪಣ್ಣ ಅವರು ಅಡಿಕೆ ಖರೀದಿ ವ್ಯವಹಾರ ನಡೆಸುತ್ತಿದ್ದರು. ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಲಹ ಏರ್ಪಟ್ಟು ರಂಜನ್ ಚಿಣ್ಣಪ್ಪ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಎರಡು ಗುಂಡುಗಳು ಅಂಗಡಿಯ ಶಟರ್‌ಗೆ ತಗುಲಿದ ಪರಿಣಾಮ ಬೋಪಣ್ಣ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿ ಹಾಗೂ ಸ್ಥಳದಲ್ಲೇ ಬಿದ್ದಿದ್ದ ರಿವಾಲ್ವರ್ ಅನ್ನು ವಶಕ್ಕೆ ಪಡೆದಿರುವ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.