Advertisement

ಬಿಹಾರದ ಸರ್ಕಾರಿ ಉದ್ಯೋಗಿಗಳಿನ್ನು ಗುಂಡು ಹಾಕುವಂತಿಲ್ಲ

03:45 AM Feb 17, 2017 | Team Udayavani |

ಪಟ್ನಾ: ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಎಲ್ಲಿಯೂ ಮದ್ಯಪಾನ ಮಾಡಬಾರದು. ಬಿಹಾರದಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ. ಅದಕ್ಕಾಗಿ ಬಿಹಾರ ಸರ್ಕಾರಿ ಉದ್ಯೋಗಿಗಳ ಸೇವಾ ನಡತೆ ಕಾಯ್ದೆ 1976ಕ್ಕೆ ತಿದ್ದುಪಡಿ ತರುವ ಬಗ್ಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. 

Advertisement

2016ರ ಏಪ್ರಿಲ್‌ನಿಂದ ಬಿಹಾರದಲ್ಲಿ ಕಟ್ಟು ನಿಟ್ಟಿನ ಪಾನ ನಿಷೇಧ ಜಾರಿಯಲ್ಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ  ಎಂದು ಬಿಹಾರ ಸಂಪುಟ ಕಾರ್ಯದರ್ಶಿ ಬ್ರಿಜೇಶ್‌ ಮಲ್ಹೋತ್ರಾ ತಿಳಿಸಿದ್ದಾರೆ. ಸದ್ಯ ಕೆಲಸದ ಸ್ಥಳದಲ್ಲಿ ಮಾತ್ರ ಮದ್ಯಪಾನ, ಮಾದಕ ವಸ್ತುಗಳ ಸೇವನೆಗೆ ನಿಷೇಧ ಇದೆ. ಹೊಸ ನಿಯಮ ಪ್ರಕಾರ ಸರ್ಕಾರಿ ಅಧಿಕಾರಿಗಳು ಎಲ್ಲಿಯೂ ಮಧ್ಯಪಾನ ಮಾಡುವಂತೆಯೇ ಇಲ್ಲ!

Advertisement

Udayavani is now on Telegram. Click here to join our channel and stay updated with the latest news.

Next