ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಅಟ್ಟಹಾಸ ಜಾಸ್ತಿಯಾಗುತ್ತಿದೆ. ಮತ್ತೆ ಇಡೀ ದೇಶಕ್ಕೆ ದೇಶವೇ ಸಂಪೂರ್ಣ ಲಾಕ್ಡೌನ್ ಆಗುತ್ತದೆಯೇ ಎಂಬ ಭಯದಲ್ಲಿ ಜನರಿದ್ದಾರೆ. ಈ ನಡುವೆ ಪೆಟ್ರೋಲಿಯಂ ಸಚಿವಾಲಯವು ಹೊಸ ಎಲ್ ಪಿ ಜಿ ಕನೆಕ್ಷನ್ ನಿಯಮಗಳನ್ನು ಸುಲಭಗೊಳಿಸಿದೆ.
ಹೌದು, ನಿವಾಸ ಪ್ರಮಾಣ ಪತ್ರ ನೀಡದೆಯೂ ಕೂಡ ಇನ್ಮುಂದೆ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ನೀವು ಅಡುಗೆ ಅನಿಲವನ್ನು ಪಡೆಯಬಹುದಾಗಿದೆ.
ಒಂದು ಐಡಿ ಫ್ರೂಫ್ ಇದ್ದರೆ ಸಾಕು ನಿಮಗೆ ಎಲ್ ಪಿ ಜಿ ಸಂಪರ್ಕ ಸಿಗಲಿದೆ. ಪೆಟ್ರೋಲಿಯಂ ಸಚಿವಾಲಯ ಈ ಹಿನ್ನೆಲೆಯಲ್ಲಿ ಎಲ್ಲಾ ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಸದ್ಯದಲ್ಲೇ ಗ್ರಾಹಕರಿಗೆ ಈ ನಿರ್ದೇಶನ ಜಾರಿ ಆಗಲಿದೆ.
ಓದಿ : ಯುವತಿಗೆ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ!
ಈ ಕುರಿತಾಗಿ ಮಾತನಾಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಕೇಂದ್ರ ಸರ್ಕಾರ ಎರಡು ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ಉಚಿತ ಎಲ್ ಪಿ ಜಿ ಗ್ಯಾಸ್ ನೀಡುವ ಉದ್ದೇಶ ಇಟ್ಟುಕೊಂಡಿದೆ. ನಮ್ಮದು ಪ್ರಗತಿಶೀಲ ಅರ್ಥವ್ಯವಸ್ಥೆ. ಶ್ರೀಮಂತ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ನಮ್ಮ ಆದ್ಯತೆಗಳು ಬೇರೆ ಎಂದು ಅವರು ಹೇಳಿದ್ದಾರೆ.
ಇನ್ನು, ಕಾರ್ಬನ್ ಮುಕ್ತ ದೇಶಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಹಾಗಾಗಿ ವಾತಾವರಣಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ಭಾರತ ಕಡಿಮೆ ಬಳಸಲಿದೆ. ಸಾಧ್ಯವಾದಷ್ಟು ಹೆಚ್ಚು ಪರಿಸರ ಸ್ನೇಹಿ ಇಂಧನ ಬಳಸಲು ಭಾರತ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತ ತನ್ನ ಅಗತ್ಯದ ಶೇ. 40 ರಷ್ಟು ಇಂಧನವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯಲಿದೆ ಎಂದು ಪ್ರಧಾನ್ ಹೇಳಿದ್ದಾರೆ.
ಓದಿ : ಕೋವಿಡ್ ಸಂಕಷ್ಟ : ಮೇ 3ರವರೆಗೆ ದೆಹಲಿ ಲಾಕ್ ಡೌನ್ ವಿಸ್ತರಣೆ : ಅರವಿಂದ್ ಕೇಜ್ರಿವಾಲ್