ಸಿದ್ದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಅಗ್ನಿ ಅವಘಡಲ್ಲಿ ಎರಡು ಅಂಗಡಿಗಳು ಸುಟ್ಟು ಕಾರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಘಟನೆ ಕುಂದಾಪುರ ತಾಲೋಕಿನ ಸಿದ್ದಾಪುರದಲ್ಲಿ ಸೋಮವಾರ ರಾತ್ರಿ ಸುಮಾರು 11.30ರ ಸುಮಾರಿಗೆ ಸಂಭವಿಸಿದೆ.
ಅಗ್ನಿ ಅವಘಡದಿಂದ ಸ್ಪೇರ್ ಪಾರ್ಟ್ಸ್ ಅಂಗಡಿ ಅದೇ ಕಟ್ಟಡದಲ್ಲಿದ್ದ ನಂದಿನಿ ಮಿಲ್ಕ್ ಪಾರ್ಲರ್ ಸುಟ್ಟು ಕರಕಲಾಗಿದೆ, ಅಲ್ಲದೆ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿದ್ದ ಬಿಡಿಭಾಗಗಳು, ಟಯರ್, ಆಯಿಲ್ ಡಬ್ಬಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ.
ಅದೇ ರೀತಿ ನಂದಿನಿ ಪಾರ್ಲರ್ ನಲ್ಲಿದ್ದ ನಂದಿನಿ ಉತ್ಪನ್ನಗಳು ಫ್ರಿಡ್ಜ್ ಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಬೆಂಕಿ ಅವಘಡ ಸಂಭವಿಸಿದ ಕೂಡಲೇ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ ಆದರೆ ಬೆಂಕಿಯು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಲಾಗಿದೆ ಕುಂದಾಪುರದಿಂದ ಸಿದ್ಧಾಪುರಕ್ಕೆ ತಲುಪಲು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಅಷ್ಟೋತ್ತಿಗಾಗಲೇ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿತ್ತು ಬಳಿಕ ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರ ಹರಸಾಹಸದಿಂದ ಬೆಂಕಿ ನಂದಿಸಲಾಯಿತು.
ಇದನ್ನೂ ಓದಿ: Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ