Advertisement

ತಡವಾಗಿ ಬೇಡಿಕೆ ಸಲ್ಲಿಸಿದ ಖಾಸಗಿ ಶಾಲೆಗಳಲ್ಲಿ ಮಾತ್ರ ಪಠ್ಯ ಪುಸ್ತಕ ಕೊರತೆ

09:18 PM Nov 09, 2022 | Team Udayavani |

ಬೆಂಗಳೂರು: 2022-23ನೇ ಸಾಲಿಗೆ 2021 ಡಿಸೆಂಬರ್‌ನಲ್ಲಿ ಸ್ಯಾಟ್ಸ್‌ ಮೂಲಕ ಬೇಡಿಕೆ ಪಡೆದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬೇಡಿಕೆ ಅನ್ವಯ ಪಠ್ಯಪುಸ್ತಕ ವಿತರಿಸಲಾಗಿದೆ. ತಡವಾಗಿ ಬೇಡಿಕೆ ಸಲ್ಲಿಸಿದ ಖಾಸಗಿ ಶಾಲೆಗಳಲ್ಲಿ ಮಾತ್ರ ಪಠ್ಯ ಪುಸ್ತಕಗಳ ಕೊರತೆ ಎದುರಾಗಿದೆ ಎಂದು ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

ಟ್ವಿಟರ್‌ಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಅರ್ಧ ವರ್ಷವಾದರೂ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿಲ್ಲ ಎಂಬುದಾಗಿ ವರದಿಯಾಗಿತ್ತು. ಈ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು, ನಿಗದಿತ ಸಮಯದಲ್ಲಿ ಹಣ ಪಾವತಿಸಿ, ಮಾರಾಟ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸದಿದ್ದ ಕೆಲವು ಶಾಲೆಗಳು ಪಠ್ಯಪುಸ್ತಕಗಳನ್ನು ನೀಡಲು ಮನವಿ ಮಾಡಿದರು.

ಈ ಕಾರಣದಿಂದ ಸ್ಯಾಟ್ಸ್‌ನಲ್ಲಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 17,710 ಅನುದಾನರಹಿತ ಖಾಸಗಿ ಶಾಲೆಗಳ ಪೈಕಿ 1,826 ಶಾಲೆಗಳವರು 2022 ಆಗಸ್ಟ್‌ನಲ್ಲಿ ಹೆಚ್ಚುವರಿ 5,46,547 ಪಠ್ಯಪುಸ್ತಕಗಳಿಗೆ ಮತ್ತೂಮ್ಮೆ ಬೇಡಿಕೆ ಸಲ್ಲಿಸಿ ಹಣ ಪಾವತಿಸಿದ್ದರು. ಅದರಂತೆ ಮುದ್ರಕರಿಗೆ ಹೆಚ್ಚುವರಿ ಬೇಡಿಕೆಯ ಪಠ್ಯಪುಸ್ತಕ ಮುದ್ರಿಸಿ, ಸರಬರಾಜು ಮಾಡಲು ಕಾರ್ಯಾದೇಶ ನೀಡಿದ್ದು, ಒಟ್ಟು ಬೇಡಿಕೆಯ ಶೇ.60 ಪುಸ್ತಕಗಳು ಈಗಾಗಲೇ ಬ್ಲಾಕ್‌ ಹಂತಕ್ಕೆ ಸರಬರಾಜು ಆಗಿವೆ. ಉಳಿದ ಪುಸ್ತಕಗಳನ್ನು ವಾರದೊಳಗೆ ಖಾಸಗಿ ಶಾಲೆಗಳಿಗೆ ಸರಬರಾಜು ಮಾಡಲು ಸಂಘದಿಂದ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next