ಗಂಗಾವತಿ: ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಸೇರಿ ಪ್ರಮುಖ ಕೋರ್ಸ್ ಗಳಿಗೆ ಉಪನ್ಯಾಸಕರ ಕೊರತೆ ಇದ್ದು ಸ್ಥಳಿಯವಾಗಿ ಭರ್ತಿ ಮಾಡಿಕೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಪ್ರಾಚಾರ್ಯರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಉನ್ನತ ಗ್ರೇಡ್ ಹೊಂದಿದ್ದರೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಕೆಲ ಪ್ರಮುಖ ಕೋರ್ಸ್ ಗಳಿಗೆ ಉಪನ್ಯಾಸಕರ ಕೊರತೆ ಇದೆ.ಜತೆಗೆ ಖಾಯಂ ಪ್ರಾಚಾರ್ಯರನ್ನು ನಿಯೋಜನೆ ಮಾಡಬೇಕು.ಕಾಲೇಜಿನ ವತಿಯಿಂದ ಹಾಸ್ಟೆಲ್ ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಸರ್ವಜ್ಞಮೂರ್ತಿ,ಯುವ ಉತ್ತೇಜನ ಸೇನಾ ಪಡೆಯ ಜಿಲ್ಲಾ ಉಪಾಧ್ಯಕ್ಷ ಗಾಳೇಶ್ ರಾಥೋಡ್,ಸಂಘಟನಾ ಕಾರ್ಯದರ್ಶಿ ಕೌಸ್ತುಬ್ ದಂಡಿನ್ ,ಜಿಲ್ಲಾ ಸದಸ್ಯರಾದ ಪ್ರಾಣೇಶ್ ಬಿ ಆಂಜನೇಯ. ಮತ್ತು ಕಾಲೇಜು ವಿದ್ಯಾರ್ಥಿಗಳಿದ್ದರು.