ಬಾಗಲಕೋಟೆ : ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಸುಮಾರು ನಾಲ್ಕೈದು ಎಕರೆ ಕಬ್ಬು ಹಾಗೂ ಗೋವಿನ ಜೋಳದ ಗೂಡಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಕಲ್ಲಾಪುರ ಎಸ್.ಕೆ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ಹಲಗಲಿ, ಲಕ್ಷ್ಮೀಬಾಯಿ ಹಿರೆಕೊಪ್ಪ, ಭೈಲಪ್ಪ ಹಿರೆಕೊಪ್ಪ, ರಮೇಶ ಹಲಗಲಿ, ಯಮನಪ್ಪ ದಾನಿ, ಲಕ್ಷ್ಮವ್ವ ಹಟ್ಟಿ ಈ ರೈತರ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಿದ್ದವ್ವ ಹಟ್ಟಿ ಅವರ ಗೋವಿನ ಜೋಳದ ಹೊಟ್ಟಿನ ಗೂಡು ಸಹ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದ ಎಂ.ಆರ್.ಎನ್ ನಿರಾಣಿ ಸಕ್ಕರೆ ಕಾರ್ಖಾನೆಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದರು. ಇತ್ತ 25 ಕಿಮೀ ದೂರದಿಂದ ಬರುವ ಬಾದಾಮಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಕೈ ಜೋಡಿಸಿದಂತಾಯಿತು.
ಬಾದಾಮಿ ತಹಸಿಲ್ದಾರ ಸುಹಾಸಿನಿ ಇಂಗಳೆ, ಕಂದಾಯ ನಿರೀಕ್ಷಕ ಎ ಡಿ ಸಾರವಾಡ, ಗ್ರಾಮ ಲೇಕ್ಕಾಧಿಕಾರಿ ವಿ ಎ ವಿಶ್ವಕರ್ಮ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
25 ಕಿಮೀ ದೂರದ ತಾಲೂಕು ಮಟ್ಟದಲ್ಲಿರುವ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ರೈತರ ಬೆಳೆಗಳು ಸುಟ್ಟು ಕರಕಲಾಗುತ್ತವೆ.
ತಾಲೂಕಿನ ಕಡೆ ಹಳ್ಳಿಗಳು ಸುಮಾರು 40 ಕಿಮೀ ದೂರದಲ್ಲಿವೆ.
ಇದನ್ನೂ ಓದಿ :ಸಿಂದಗಿ ಉಪಚುನಾವಣೆ ಹಿನ್ನೆಲೆ : ಪುರಸಭೆ ಅಧ್ಯಕ್ಷ ಹಾಗೂ ಪಿಎಸ್‌ಐ ನಡುವೆ ಮಾತಿನ ಚಕಮಕಿ