Advertisement

Mangaluru ಕಡಲ ತೀರ ನಿರ್ವಹಣೆಗೆ ಶೋರ್‌ಲೈನ್‌ ವರದಿ ಕಡ್ಡಾಯ!

01:27 AM Sep 10, 2024 | Team Udayavani |

ಮಂಗಳೂರು: ಇನ್ನು ಮುಂದೆ ಬಂದರು ಅಭಿವೃದ್ದಿ, ಬ್ರೇಕ್‌ ವಾಟರ್‌ ನಿರ್ಮಾಣ, ಕಡಲ್ಕೊರೆತ ತಡೆಯ ಸ್ವರೂಪ ರಚನೆಗೆ ಸಿಆರ್‌ಝಡ್‌ ಅನುಮತಿ ಸಿಗಬೇ ಕಿದ್ದರೆ “ಕಡಲ ತೀರ ನಿರ್ವಹಣ ಯೋಜನೆ’ (ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ಪ್ಲ್ರಾನ್‌) ವರದಿ ಪಾಲನೆ ಕಡ್ಡಾಯ.

Advertisement

ರಾಷ್ಟ್ರೀಯ ಹಸುರು ಪೀಠ(ಎನ್‌ಜಿ ಟಿ) ನಿರ್ದೇಶನದಂತೆ ರಾಜ್ಯದ ಕಡಲ ತೀರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೊದಲ ಬಾರಿ ವಿಸ್ತೃತ ಅಧ್ಯಯನ ನಡೆಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿರ್ಧರಿಸಿದೆ. ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟೈನಬಲ್‌ ಕೋಸ್ಟಲ್‌ ಮ್ಯಾನೇಜ್ಮೆಂಟ್(ಎನ್‌ಸಿಎಸ್‌ಸಿಎಂ)ಗೆ ದೇಶದ ವಿವಿಧ ಕರಾವಳಿ ಭಾಗದ ಸಮಗ್ರ ವರದಿ ರೂಪಿಸಲು ಸೂಚಿಸಲಾಗಿದೆ. ಈ ಸಂಸ್ಥೆಯ ಪರಿಣಿತರು 3 ತಿಂಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಆಧ್ಯಯನದ ಆಂಶಗಳನ್ನು° 3 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪರಿಣಿತರ ಉಪಸ್ಥಿತಿಯಲ್ಲಿ ಚರ್ಚಿಸಲಾಗಿದೆ. ಎನ್‌ಸಿಎಸ್‌ಸಿಎಂ ತಜ್ಞರು ಶೀಘ್ರವೇ ನೀಡುವ ವರದಿಯನ್ನು ನೇರವಾಗಿ ಅಂಗೀಕರಿ ಸಬೇಕೇ? ಅಥವಾ ಪರಿಷ್ಕರಿಸಬೇಕೇ? ಎನ್ನುವ ಬಗ್ಗೆ ರಾಜ್ಯ ಸರಕಾರ ನಿರ್ಧರಿ ಸಲಿದೆ. ಕಡಲ ತೀರ ಪ್ರದೇಶದ ಭವಿಷ್ಯದ ಸವಾಲುಗಳು, ಸಂಕಷ್ಟಗಳು ಹಾಗೂ ಅವುಗಳಿಗೆ ಪರಿಹಾರ ಸೇರಿದಂತೆ ಹಲವು ಸಂಗತಿಗಳನ್ನು ವರದಿಯಲ್ಲಿ ಉಲ್ಲೇಖಿಸಿರುವ ಸಂಭವವಿದೆ.

ಶೀಘ್ರವೇ ವರದಿ ಸಲ್ಲಿಕೆಯಾಗಲಿದ್ದು, ಈ ವರದಿಯ ಸಲಹೆ ಆಧರಿಸಿ ಭವಿಷ್ಯದಲ್ಲಿ ಕಡಲ ತೀರದ ಚಟು ವಟಿಕೆಗಳನ್ನು ನಿರ್ಧರಿಸಲಾಗುತ್ತದೆ.

ನಿರ್ದಿಷ್ಟ ಭಾಗದಲ್ಲಿ ಕಲ್ಲು ಹಾಕಿ ಅಥವಾ ತಡೆಗೋಡೆ ನಿರ್ಮಿಸಿ ಅಲೆ ಗಳನ್ನು ನಿಯಂತ್ರಿಸುವ ಬದಲು ನೈಸರ್ಗಿಕ ರಚನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದೇ ಶಾಶ್ವತ ಪರಿಹಾರ ಆಗಬಹುದು ಮತ್ತು ಕಡಲ ತೀರದಲ್ಲಿ ಮನೆಗಳ ನಿರ್ಮಾಣ ತಡೆಗೆ ಕೆಲವೊಂದು ಶಿಫಾರಸುಗಳನ್ನು ಸಮಿತಿ ಕೈಗೊಂಡಿರುವ ಸಾಧ್ಯತೆ ಇದೆ. ಕಡಲ ತೀರದ ಯಾವ ಭಾಗದಲ್ಲಿ ಯಾವ ಯೋಜನೆಗೆ ಅವಕಾಶ ನೀಡಬಹುದು? ಬಂದರು ಅಭಿವೃದ್ದಿಗೆ ಯಾವ ಕ್ರಮ ಸೂಕ್ತ? ಯಾವ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಬೇಕು ಇತ್ಯಾದಿ ಅಂಶಗಳನ್ನು ವರದಿ ಒಳಗೊಂಡಿರುವ ಸಾಧ್ಯತೆ ಇದೆ.

Advertisement

ಕೃತಕ ದಿಬ್ಬಗಳ ರಚನೆಗೆ ಒಲವು!
ಸಮುದ್ರ ದಡದಿಂದ ನಿರ್ದಿಷ್ಟ ದೂರ ನೀರಿನಲ್ಲಿ ಮೀನುಗಳನ್ನು ಆಕರ್ಷಿಸುವ ಕೃತಕ ದಿಬ್ಬಗಳನ್ನು (ಫಿಶ್‌ ಅಗ್ರಿಗೇಟಿಂಗ್‌ ಡಿವೈಸ್‌) ನಿರ್ಮಿ ಸುವ ಯೋಜನೆಯನ್ನು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಸಮುದ್ರದ ನೀರಿನ ತೆರೆ ದಡ ತಲುಪುವ ಮೊದಲು ನಿರ್ದಿಷ್ಟ ಸ್ಥಳದಲ್ಲಿ ನೀರಿನ ಮಧ್ಯೆಯೇ ಹೊಡೆಯುತ್ತದೆ. ಇಂತಹ ವೇವ್‌ ಬ್ರೇಕಿಂಗ್‌ ಝೋನ್‌ ಗುರುತಿಸಿ ಇದಕ್ಕೂ ಸ್ವಲ್ಪ ಹಿಂದೆ ಫಿಶ್‌ ಅಗ್ರಿಗೇಟಿಂಗ್‌ ಡಿವೈಸ್‌ ಅಳವಡಿಸಿ ಕಡಲ ಅಲೆಗಳ ವೇಗ ದಡ ತಲುಪುವ ಮೊದಲೇ ಕಡಿಮೆಯಾಗಬಹುದು ಎನ್ನುವ ಲೆಕ್ಕಾಚಾರವಿದೆ.

ಕಡಲ ತೀರಗಳಿಗೆ “ಕಲರ್‌ ಕೋಡಿಂಗ್‌’!
ಕಡಲ ತೀರಗಳಿಗೆ ಕಲರ್‌ ಕೋಡಿಂಗ್‌ ನೀಡಲಾಗಿದೆ. ಈ ಪೈಕಿ ಕಡಲಕ್ಕೊರೆತ ಅಧಿಕವಿರುವ ಪ್ರದೇಶಕ್ಕೆ “ರೆಡ್‌’ ನೀಡಿದ್ದರೆ, ಉಳ್ಳಾಲದ ಬಟ್ಟಪ್ಪಾಡಿ, ಸಸಿಹಿತ್ಲು ಬೀಚ್‌ಗಳು “ರೆಡ್‌’ ಪಟ್ಟಿಯಲ್ಲಿವೆ. ಉಡುಪಿಯ ಪಡುಬಿದ್ರಿ ಬಳಿಯ ನಡಿಪಟ್ಣ ಹಾಗೂ ಬೈಂದೂರಿನ ನದಿ-ಸಮುದ್ರ ಸೇರುವ ಪ್ರದೇಶಕ್ಕೂ ರೆಡ್‌ ನೀಡಲಾಗಿದೆ. ಕಡಲ್ಕೊರೆತ ಮಧ್ಯಮ ಪ್ರಮಾಣದಲ್ಲಿರುವಲ್ಲಿಗೆ “ಆರೆಂಜ್‌’, ಕಡಿಮೆ ಇರುವಲ್ಲಿಗೆ “ಎಲ್ಲೋ’, ಕಡಲ್ಕೊರೆತ ಆಗದ ಪ್ರದೇಶಕ್ಕೆ “ಗ್ರೀನ್‌’ ಕೋಡಿಂಗ್‌ ನೀಡಲಾಗುತ್ತದೆ. ಈ ಕಲರ್‌ ಕೋಡ್‌ ಆಧರಿಸಿಯೇ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ.

ತಜ್ಞರ ವರದಿ ಸಿದ್ಧವಾಗಿದೆ‌
ಎನ್‌ಸಿಎಸ್‌ಸಿಎಂ ತಂಡದ ತಜ್ಞರು ಈಗಾಗಲೇ ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಕಡಲ ತೀರಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಿದ್ದಾರೆ. ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಫ್ಲ್ಯಾನ್‌ ವರದಿ ಅನುಷ್ಠಾನಕ್ಕೆ ಬಂದ ಬಳಿಕ ಕಡಲ ಭಾಗದ ವಿವಿಧ ಚಟುವಟಿಕೆ ನಡೆಸಲು ಇದುವೇ ಮುಖ್ಯ ಆಧಾರವಾಗಲಿದೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next