Advertisement
ಶಾಪ್ಸಿ ಎಂಬುದು ಆ್ಯಪ್ ಆಧಾರಿತ ಸೇವೆಯಾಗಿದ್ದು, ಇದರ ಮೂಲಕ ಯಾವುದೇ ಬಂಡವಾಳ ತೊಡಗಿಸದೇ ಆನ್‍ಲೈನ್ ಮೂಲಕ ಆದಾಯಗಳಿಸಬಹುದಾಗಿದೆ.
Related Articles
Advertisement
ನಿಮ್ಮ ಗೆಳೆಯರು ನನಗೊಂದು ಮೊಬೈಲ್ ಫೋನ್ ಬೇಕು ಎಂದು ನಿಮ್ಮನ್ನು ಕೇಳಿದರೆ ಅದನ್ನು ನೀವು ಶಾಪ್ಸಿ ಮೂಲಕ ಆರ್ಡರ್ ಮಾಡುವುದು. ಆ ಫೋನ್ ಡೆಲಿವರಿ ಆದ ಬಳಿಕ ನಿಮಗೆ ಫ್ಲಿಪ್ ಕಾರ್ಟ್ ಕಮಿಷನ್ ನೀಡುತ್ತದೆ!
ಶಾಪ್ಸಿ ಆಪ್‍ನಲ್ಲಿ ಮೊಬೈಲ್ ಫೋನ್ ವಿಭಾಗಕ್ಕೆ ಹೋದರೆ, ಬ್ರಾಂಡ್ ವೈಸ್ ಮೊಬೈಲ್‍ಗಳ ವಿವರ ಇರುತ್ತದೆ. ನೀವು ಸ್ಯಾಮ್ ಸಂಗ್ ವಿಭಾಗಕ್ಕೆ ಹೋಗಿ ಒತ್ತಿದರೆ, ಅದು ಫ್ಲಿಪ್‍ಕಾರ್ಟ್ ಆಪ್ ನಲ್ಲಿ ಬಂದಂತೆಯೇ ಎಲ್ಲ ವಿವರಗಳನ್ನೂ ನೀಡುತ್ತದೆ. ಅಲ್ಲಿ ಅದನ್ನು ಕಾರ್ಟ್ ಗೆ ಹಾಕಿ, ನಿಮ್ಮ ಗೆಳೆಯರ ವಿಳಾಸಕ್ಕೆ ಆರ್ಡರ್ ಪ್ಲೇಸ್ ಮಾಡಬೇಕು. ಆ ಮೊಬೈಲ್ ನಿಮ್ಮ ಗೆಳೆಯರಿಗೆ ತಲುಪಿ, ಅದರ ರಿಟರ್ನ್ ಅವಧಿ ಮುಗಿದ ಬಳಿಕ ನಿಮ್ಮ ಶಾಪ್ಸಿ ಅಕೌಂಟಿಗೆ ಕಮಿಷನ್ ರೂಪದಲ್ಲಿ ಫ್ಲಿಪ್ ಕಾರ್ಟ್ ವೋಚರ್ ನಿಮಗೆ ದೊರಕುತ್ತದೆ!
ನೀವು ಶಾಪ್ಸಿಯಲ್ಲಿ ಲಭ್ಯವಾಗುವ ಉತ್ಪನ್ನಗಳ ವಿವರ, ಕ್ಯಾಟಲಾಗನ್ನು ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು.
ನಿಮ್ಮ ಗೆಳೆಯರು ಅದನ್ನು ಗಮನಿಸಿ, ನಿಮಗೆ ಅದನ್ನು ಆರ್ಡರ್ ಮಾಡಲು ಹೇಳಿದಾಗ ಆರ್ಡರ್ ಮಾಡಿಕೊಡಬಹುದು.
ಎಷ್ಟು ಕಮಿಷನ್ ದೊರಕುತ್ತದೆ?:
ಕಮಿಷನ್ ಒಂದು ಉತ್ಪನ್ನದಿಂದ ಇನ್ನೊಂದಕ್ಕೆ ವಿಭಿನ್ನವಾಗಿದೆ. ಉದಾಹರಣೆಗೆ ಮೊಬೈಲ್ ಫೋನ್ ಗೆ 75 ರೂ. ಕಮಿಷನ್ ಇದ್ದರೆ, ಒಂದು ಕಂಪೆನಿಯ ಇಯರ್ ಫೋನ್ ಗೆ 235 ಕಮಿಷನ್ ಇದೆ. ಪವರ್ ಬ್ಯಾಂಕ್ ಗಳಿಗೆ 30 ರೂ. ಇದೆ. ವಾಶಿಂಗ್ ಮೆಷೀನ್ ಗಳಿಗೆ 500 ರೂ. ಗಳಿಂದ 800 ರೂ.ಗಳವರೆಗೂ ಕಮಿಷನ್ ದೊರಕುತ್ತದೆ.
ಗ್ರಾಹಕರು ಕೊಂಡ ಪದಾರ್ಥಗಳು ದೋಷದಿಂದ ಕೂಡಿದ್ದರೆ, ಅದಕ್ಕೆ ನಿಗದಿಪಡಿಸಿರುವ ರಿಟರ್ನ್ ದಿನಾಂಕದೊಳಿಗೆ ಹಿಂದಿರುಗಿಸುವ ಅವಕಾಶವೂ ಇದೆ. ರಿಟರ್ನ್ ಆದರೆ ಅದರ ಕಮಿಷನ್ ನಿಮಗೆ ದೊರಕುವುದಿಲ್ಲ.
ಈ ಮೂಲಕ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರನ್ನು ಇನ್ನಷ್ಟು ಜನರಿಗೆ ತಲುಪುವ ವಿಶ್ವಾಸ ಹೊಂದಿದೆ. ಎಷ್ಟೋ ಜನರಿಗೆ ಆನ್‍ಲೈನ್ ಮೂಲಕ ಹೇಗೆ ಬುಕ್ ಮಾಡುವುದು ಎಂದು ತಿಳಿದಿರುವುದಿಲ್ಲ. ಅಂಥವರ ಪರವಾಗಿ ಬುಕ್ ಮಾಡಿಕೊಡುವವರು ಇದರಿಂದ ಆದಾಯ ಗಳಿಸಬಹುದಾಗಿದೆ.
-ಕೆ.ಎಸ್. ಬನಶಂಕರ ಆರಾಧ್ಯ