Advertisement

ಶಾಪಿಂಗ್‌ ಮಾಡಿ ಸೋಂಕು ದೃಢವಾದರೆ 50 ಸಾವಿರ; ವಿವಾದ ತಂದ ಜಾಹೀರಾತು

01:29 AM Aug 19, 2020 | mahesh |

ಕೊಟ್ಟಾಯಂ: ಸಾಮಾಜಿಕ ಜವಾಬ್ದಾರಿ ಮರೆತು ಕೋವಿಡ್ ಸಂದಿಗ್ಧತೆಯನ್ನು ಹಗುರವಾಗಿ ಚಿತ್ರಿಸಿದ ಕೇರಳದ ಎಲೆಕ್ಟ್ರಾನಿಕ್ಸ್‌ ಶಾಪ್‌ನ ಜಾಹೀರಾತು ಈಗ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.

Advertisement

“ನಮ್ಮಲ್ಲಿ ಶಾಪಿಂಗ್‌ ನಡೆಸಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ, ಪಾಸಿಟಿವ್‌ ದೃಢವಾದ ವಿಚಾರ ತಿಳಿಸಿದರೆ ಜಿಎಸ್‌ಟಿರಹಿತ 50 ಸಾವಿರ ರೂ. ಕ್ಯಾಶ್‌ಬ್ಯಾಕ್‌ ನೀಡುತ್ತೇವೆ’ ಎಂಬ ಶಾಪಿಂಗ್‌ ಮಾಲ್‌ನ ವಿಲಕ್ಷಣ ಜಾಹೀರಾತು ಜನಾಕ್ರೋಶಕ್ಕೆ ಕಾರಣವಾಗಿದೆ.

“ಈ ಆಫ‌ರ್‌ ಆಗಸ್ಟ್‌ 15- 30ರವರೆಗೆ ಮಾತ್ರ’ ಎಂಬ ಷರತ್ತಿನ ಜಾಹೀರಾತು ಮುದ್ರಣ, ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಹಣ ಸಂಪಾದನೆಯ ಆಸೆಗಾಗಿ ಸಂಸ್ಥೆ ಮಾಲೀಕರು ಸೋಂಕನ್ನು ಉದ್ದೇಶಪೂರ್ವ ಕವಾಗಿ ಹಬ್ಬಿಸಲು ಯತ್ನಿಸಿದ್ದಾರೆ. ಸಾಮಾಜಿಕ ಹೊಣೆ ಮರೆತು ಬೇಜ ವಾಬ್ದಾರಿತನ ಪ್ರದರ್ಶಿಸಿ ದ್ದಾರೆ ಎಂದು ಆರೋಪಿಸಿ ಕೊಟ್ಟಾಯಂನ ಪಾಲಾ ಮುನ್ಸಿಪಾಲಿಟಿಯ ಕೌನ್ಸಿಲರ್‌ ಪ್ರಕರಣವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗಮನಕ್ಕೆ ತಂದಿದ್ದರು. ಸಿಎಂ ಕೂಡಲೇ ಶಾಪಿಂಗ್‌ ಮಾಲ್‌ ಅನ್ನು ಬಂದ್‌ ಮಾಡಲು ಆದೇಶಿಸಿದ್ದು, ಹೆಚ್ಚುವರಿ ತನಿಖೆಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next