ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ರುದ್ರಾಂಕ್ಷ್ ಪಾಟೀಲ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 10 ಮೀ. ಏರ್ ರೈಫಲ್ ವಿಭಾಗದ ಚಿನ್ನ ಮತ್ತು ಬೆಳ್ಳಿ ಪದಕಗಳು ಚೀನಾಕ್ಕೆ ಒಲಿದವು.
Advertisement
ಟೋಕೊಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶೆಂಗ್ ಲಿಹಾವೊ ಸ್ವರ್ಣ ಗೆದ್ದರೆ, ಹುವಾಂಗ್ ಯುಟಿಂಗ್ ರಜತವನ್ನು ತಮ್ಮದಾಗಿಸಿಕೊಂಡರು. ಸ್ಪರ್ಧೆ 3 ದಿನಗಳನ್ನು ಪೂರೈಸಿದ್ದು, ಚೀನಾದ ಪ್ರಭುತ್ವ ಮುಂದುವರಿದಿದೆ. ಅದು 5 ಚಿನ್ನ, ಒಂದು ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿದೆ. ಭಾರತ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ 3 ಕಂಚಿನ ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದೆ.