Advertisement

ಶೂಟಿಂಗ್‌ ವಿಶ್ವಕಪ್‌: 25 ಮೀ. ರ್‍ಯಾಪಿಡ್‌ ಫೈರ್‌ ನಲ್ಲಿ ವಿಜಯ್‌ವೀರ್‌-ತೇಜಸ್ವಿನಿಗೆ ಬಂಗಾರ

10:43 PM Mar 27, 2021 | Team Udayavani |

ಹೊಸದಿಲ್ಲಿ: ಇಲ್ಲಿನ “ಡಾ| ಕರ್ಣಿ ಸಿಂಗ್‌ ರೇಂಜ್‌’ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಭಾರತೀಯ ಜೋಡಿಗೆ ಚಿನ್ನ ಮತ್ತು ಬೆಳ್ಳಿ ಪದಕ ಒಲಿದಿದೆ.

Advertisement

ವಿಜಯವೀರ್‌ ಸಿಧು-ತೇಜಸ್ವಿನಿ ಸಾವಂತ್‌ ಚಿನ್ನ ಗೆದ್ದರೆ, ಭಾರತದ ಇನ್ನೊಂದು ಜೋಡಿಯಾದ ಗುರುಪ್ರೀತ್‌ ಸಿಂಗ್‌-ಅಶೋಕ್‌ ಅಭಿದ್ನ್ಯಾ ಪಾಟೀಲ್‌ 1-9ರಿಂದ ಸೋತು ಬೆಳ್ಳಿ ಪದಕ ಪಡೆದರು. ಅರ್ಹತಾ ಸುತ್ತಿನಲ್ಲಿ ಗುರುಪ್ರೀತ್‌- ಅಭಿದ್ನ್ಯಾ ಜೋಡಿ ಅಗ್ರಸ್ಥಾನ ಪಡೆದಿತ್ತು.

ಶುಕ್ರವಾರ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ಸಿಂಗಲ್ಸ್‌ ವಿಭಾಗದಲ್ಲಿ ವಿಜಯವೀರ್‌ ಬೆಳ್ಳಿ ಪದಕ ಗೆದ್ದಿದ್ದರು. ಇನ್ನೊಂದು ಕಡೆ ಟ್ರ್ಯಾಪ್‌ ಮಿಶ್ರ ವಿಭಾಗದಲ್ಲಿ ಭಾರತೀಯ ಜೋಡಿಯಾದ ಕೈನನ್‌ ಚೆನಾಯ್‌-ಶ್ರೇಯಸಿ ಸಿಂಗ್‌ ಅಂತಿಮ ಹಂತದಲ್ಲಿ ಸೋತು ನಾಲ್ಕನೇ ಸ್ಥಾನ ಪಡೆದು, ಕಂಚಿನ ಪದಕ ತಪ್ಪಿಸಿಕೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next