Advertisement

ಕಾಮನ್ವೆಲ್ತ್‌ ಗೇಮ್ಸ್‌ -2022: ಶೂಟಿಂಗ್‌ ಸ್ಪರ್ಧೆಗೆ ಶೂಟ್‌!

09:30 AM Dec 23, 2017 | Team Udayavani |

ಹೊಸದಿಲ್ಲಿ: 2022ನೇ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯ ಡರ್ಬನ್‌ ಬದಲು ಬರ್ಮಿಂಗಂ ಪಾಲಾಗುವುದರೊಂದಿಗೆ ಕೆಲವು ಪ್ರಮುಖ ಕ್ರೀಡೆಗಳಿಗೆ ಸಂಕಟ ಬಂದೊದಗಿದೆ. ಇದರಲ್ಲಿ ಶೂಟಿಂಗ್‌ ಕೂಡ ಒಂದು. ಶೂಟಿಂಗಿಗೆ ಕೇವಲ “ಐಚ್ಛಿಕ ಕ್ರೀಡೆ’ಯ ಮಾನ್ಯತೆ ಲಭಿಸಿದ್ದು, ಕೂಟದಿಂದ ಕೈಬಿಡಲಾಗಿದೆ. ಇದರಿಂದ ಭಾರತದ ಪದಕ ಬೇಟೆಗೆ ಭಾರೀ ಹಿನ್ನಡೆ ಆಗುವುದರಲ್ಲಿ ಅನುಮಾನವಿಲ್ಲ.

Advertisement

ಇನ್ನೊಂದು ವರದಿಯ ಪ್ರಕಾರ, ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ ಅಧ್ಯಕ್ಷ ಲೂಯಿಸ್‌ ಮಾರ್ಟಿನ್‌ ಅವರು ಮಿಶ್ರ ಟಿ20 ಕ್ರಿಕೆಟ್‌ ಸ್ಪರ್ಧೆಯನ್ನು ಆಯೋಜಿಸುವ ಸಲಹೆ ಮಾಡಿದ್ದಾರೆ. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ. ಬೇಕಾದರಷ್ಟೇ ಆಯ್ದುಕೊಳ್ಳುವ “ಐಚ್ಛಿಕ ಕ್ರೀಡೆ’ಗಳಲ್ಲಿ ಶೂಟಿಂಗ್‌ ಕೂಡ ಒಂದಾಗಿತ್ತು. ಒಟ್ಟು 7 ಐಚ್ಛಿಕ ಕ್ರೀಡೆಗಳನ್ನು ಸೇರಿಸಿಕೊಳ್ಳುವ ಅವಕಾಶ ಬರ್ಮಿಂಗಂ ಮುಂದಿತ್ತು. ಸದ್ಯ ಜೂಡೋ, ಟೇಬಲ್‌ ಟೆನಿಸ್‌, ಕುಸ್ತಿ, ಜಿಮ್ನಾಸ್ಟಿಕ್ಸ್‌, ಡೈವಿಂಗ್‌, ಸೈಕ್ಲಿಂಗ್‌ ಮತ್ತು 3ವಿ3 ಬಾಸ್ಕೆಟ್‌ಬಾಲ್‌ ಕ್ರೀಡೆಗಳನ್ನು ಆರಿಸಿಕೊಳ್ಳಲಾಗಿದೆ.

“ಕ್ರೀಡೆ ಹಾಗೂ ಕ್ರೀಡಾಪಟುಗಳ ಮಿತಿಯ ನಡುವೆ ಕೇವಲ ಬರ್ಮಿಂಗಂ ವ್ಯಾಪ್ತಿಗಷ್ಟೇ ಸೀಮಿತ ಗೊಳಿಸಿ ಏರ್ಪಡಿಸಲಾಗುವ ಸ್ಪರ್ಧೆ ಗಳನ್ನಷ್ಟೇ ನಾವು ಪರಿಗಣಿಸಿದ್ದೇವೆ’ ಎಂಬುದು ಕಾಮನ್ವೆಲ್ತ್‌ ಗೇಮ್ಸ್‌ನ ಇಂಗ್ಲೆಂಡ್‌ ವಕ್ತಾರ ಪೀಟರ್‌ ಹಾನನ್‌ ಅವರ ಸಮರ್ಥನೆ. ಬರ್ಮಿಂಗಂನಲ್ಲಿ ಸೂಕ್ತ ಶೂಟಿಂಗ್‌ ರೇಂಜ್‌ ಇಲ್ಲದಿರುವುದು ಹಾಗೂ ಇದನ್ನು ದೂರದ ಹೊರ ವಲಯದಲ್ಲಿ ಆಯೋಜಿಸಲು ಸಂಘಟಕರು ಸಿದ್ಧರಿಲ್ಲದಿರುವುದೇ ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಡಲು ಮುಖ್ಯ ಕಾರಣ ಎನ್ನಲಾಗಿದೆ.

ಭಾರತ ಆಶಾವಾದ
ಶೂಟಿಂಗ್‌ ಸ್ಪರ್ಧೆಯನ್ನು ಕೈಬಿಟ್ಟಿರುವುದು ವೈಯಕ್ತಿಕವಾಗಿ ಭಾರತಕ್ಕೆ ಭಾರೀ ನಷ್ಟ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಭಾರತದ ಮಟ್ಟಿಗೆ ಪದಕ ಬಾಚುವ ಕ್ರೀಡೆಯೂ ಹೌದು. ಕಳೆದ ಗ್ಲಾಸೊ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಒಟ್ಟು 17 ಶೂಟಿಂಗ್‌ ಪದಕಗಳಿಗೆ ಗುರಿ ಇರಿಸಿತ್ತು. 

ಕಾಮನ್ವೆಲ್ತ್‌ಗೇಮ್ಸ್‌ನಲ್ಲಿ ಈವರೆಗೆ ಭಾರತ ಗೆದ್ದ ಒಟ್ಟು 438 ಪದಕಗಳಲ್ಲಿ 118 ಪದಕಗಳು ಶೂಟಿಂಗ್‌ನಲ್ಲೇ ಬಂದಿವೆ.
“ನ್ಯಾಶನಲ್‌ ರೈಫ‌ಲ್‌ ಅಸೋಸಿ ಯೇಶನ್‌ ಆಫ್ ಇಂಡಿಯಾ’ದ (ಎನ್‌ಆರ್‌ಎಐ) ಅಧ್ಯಕ್ಷ ರಣಧೀರ್‌ ಸಿಂಗ್‌ ಮಾತ್ರ ಈ ಕುರಿತು ಆಶಾವಾದ ವ್ಯಕ್ತಪಡಿಸಿದ್ದಾರೆ.  2018ನೇ ಕಾಮನ್ವೆಲ್ತ್‌ ಗೇಮ್ಸ್‌ ಆಸ್ಟ್ರೇಲಿಯದ ಗೋಲ್ಡ್‌ ಕೋಸ್ಟ್‌ ನಲ್ಲಿ ನಡೆಯಲಿದ್ದು, ಇಲ್ಲಿ ಶೂಟಿಂಗ್‌ ಸ್ಪರ್ಧೆ ಎಂದಿನಂತೆ ಮುಂದುವರಿಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next