Advertisement

Shooter ಅಖಿಲ್‌ ಶೆರಾನ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ

11:48 PM Aug 20, 2023 | Team Udayavani |

ಬಾಕು (ಅಜರ್‌ಬೈಜಾನ್‌): ಭಾರತದ ಶೂಟರ್‌ ಅಖೀಲ್‌ ಶೆರಾನ್‌ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಚಾಂಪಿಯನ್‌ಶಿಪ್‌ನ ಪುರುಷರ ರೈಫ‌ಲ್‌ 3 ಪೊಸಿಶನ್‌ನಲ್ಲಿ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಈ ಅರ್ಹತೆ ಸಂಪಾದಿಸಿದರು.

Advertisement

8 ಮಂದಿ ಫೈನಲಿಸ್ಟ್‌ಗಳಲ್ಲಿ ಅಖಿಲ್‌ ಶೆರಾನ್‌ 450.0 ಅಂಕ ಗಳಿಸಿ ತೃತೀಯ ಸ್ಥಾನಿಯಾದರು. ಅವರು ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ 5ನೇ ಶೂಟರ್‌. ಉಳಿದವರೆಂದರೆ ಭೌನೀಶ್‌ ಎಂ. (ಪುರುಷರ ಟ್ರ್ಯಾಪ್‌), ಹಾಲಿ ವಿಶ್ವ ಚಾಂಪಿಯನ್‌ ರುದ್ರಾಂಕ್ಷ ಬಾಳಾಸಾಹೇಬ್‌ ಪಾಟೀಲ್‌ (ಪುರುಷರ 10 ಮೀ. ಏರ್‌ ರೈಫ‌ಲ್‌), ಸ್ವಪ್ನಿಲ್‌ ಕುಸಾಲೆ (ಪುರುಷರ 50 ಮೀ. ರೈಫ‌ಲ್‌ 3 ಪೊಸಿಶನ್‌) ಮತ್ತು ಮೆಹುಲಿ ಘೋಷ್‌ (ವನಿತೆಯರ 10 ಮೀ. ಏರ್‌ ರೈಫ‌ಲ್‌).

Advertisement

Udayavani is now on Telegram. Click here to join our channel and stay updated with the latest news.

Next