Advertisement

ಚಿತ್ರೀಕರಣ ಮುಗಿಸಿದ “ಶೋಕಿವಾಲ’

11:11 AM Feb 19, 2020 | Lakshmi GovindaRaj |

ಟಿ.ಆರ್‌.ಚಂದ್ರಶೇಖರ್‌ ಅವರು ನಿರ್ಮಿಸುತ್ತಿರುವ, ಅಜೇಯ್‌ರಾವ್‌ ನಾಯಕರಾಗಿ ಅಭಿನಯಿಸುತ್ತಿರುವ “ಶೊಕಿವಾಲ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ತುಮಕೂರು, ಮಾಗಡಿ, ಮದ್ದೂರು ಮುಂತಾದ ಕಡೆ ನಡೆದಿದೆ. ಮದ್ದೂರಿನ ಬಳಿಯ ತೈಲೂರಿನಲ್ಲಿ ಕೊನೆಯ ದಿನದ ಚಿತ್ರೀಕರಣ ನಡೆದಿದ್ದು, ಅಲ್ಲೇ ಕುಂಬಳಕಾಯಿ ಒಡೆಯಲಾಯಿತು. ಚಿತ್ರದ ಡಬ್ಬಿಂಗ್‌ ಕೂಡ ಮುಕ್ತಾಯ ಹಂತದಲ್ಲಿದೆ.

Advertisement

ಜಾಕಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ನವೀನ್‌ ಕುಮಾರ್‌ ಅವರ ಛಾಯಾಗ್ರಹಣವಿರುವ “ಶೋಕಿವಾಲ’ ನಿಗೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತವಿದೆ. ಜಯಂತ ಕಾಯ್ಕಿಣಿ, ಡಾ. ವಿ.ನಾಗೇಂದ್ರ ಪ್ರಸಾದ್‌, ಚೇತನ್‌ ಕುಮಾರ್‌ ಹಾಗೂ ಗೌಸ್‌ ಫಿರ್‌ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನ, ವಿಕ್ರಂ ಮೋರ್‌ ಸಾಹಸ ನಿರ್ದೇಶನ, ಹಾಗೂ ಮೋಹನ್‌ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ.

ಈ ಚಿತ್ರಕ್ಕೆ ಪ್ರಶಾಂತ್‌ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಅಜೇಯ್‌ ರಾವ್‌ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್‌ ಅಭಿನಯಿಸಿದ್ದಾರೆ. ಶರತ್‌ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್‌ ಶೆಟ್ಟಿ, ತಬಲ ನಾಣಿ, ಅರುಣಾ ಬಾಲರಾಜ್‌, ನಾಗರಾಜಮೂರ್ತಿ, ವಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next