ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಕುರ್ಲಾದಲ್ಲಿ ಮೂವರು ದುರುಳರು ಒಂಟಿ ಮಹಿಳೆಯ ಮನೆಗೆ ನುಗ್ಗಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಿಗರೇಟ್‌ನಿಂದ ಖಾಸಗಿ ಅಂಗಗಳನ್ನು ಸುಟ್ಟಿರುವ ಪೈಶಾಚಿಕ ಘಟನೆ ನಡೆದಿದೆ.
ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಮೂವರು ಪುರುಷರು, ಬುಧವಾರ ಮುಂಜಾನೆ 42 ವರ್ಷದ ಮಹಿಳೆಯ ಮನೆಗೆ ನುಗ್ಗಿದ್ದಾರೆ. ಆಕೆಯ ಕೂದಲನ್ನು ಹಿಡಿದು ಎಳೆದಾಡಿ, ಸರದಿ ಲೆಕ್ಕದಲ್ಲಿ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆಕೆಯ ಎದೆ ಮತ್ತು ಕೈಗಳಿಗೆ ಹರಿತವಾದ ವಸ್ತು ಬಳಸಿ ಗಾಯಗೊಳಿಸಿದ್ದಾರೆ. ಜತೆಗೆ ಖಾಸಗಿ ಅಂಗಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಆರೋಪಿಗಳು, ಪೊಲೀಸರಿಗೆ ದೂರು ನೀಡಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಎನ್‌ಜಿಒ ಸಹಾಯದಿಂದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.