Advertisement

ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

03:59 PM Nov 26, 2022 | Team Udayavani |

ವಾಡಿ: ಐದು ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣ ಸಮೀಪದ ತಾಂಡಾವೊಂದರಲ್ಲಿ ನಡೆದಿದೆ.

Advertisement

ಘಟನೆ ಹಿನ್ನೆಲೆ:

ಗ್ರಾಮದ ಹೊರ ವಲಯದ ಜಮೀನಿನಲ್ಲಿ ತಾಯಿಯೊಂದಿಗೆ ಕೃಷಿ ಕೆಲಸಕ್ಕೆ ಬಾಲಕಿ ಹೋಗಿದ್ದಳು ಎನ್ನಲಾಗಿದ್ದು, ನಿರ್ಜನ ಪ್ರದೇಶದ ಸದ್ಬಳಕೆಗೆ ಮುಂದಾದ ಅದೇ ತಾಂಡಾದ ಆರೋಪಿ ಕುಮಾರ ತಾನು ಜಾಧವ ಎನ್ನುವವ ಚಾಕಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ತೊಗರಿ ಹೊಲದೊಳಗೆ ಕರೆದೊಯ್ದಿದ್ದಾನೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಮುಂದಾದಾಗ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಪರಿಣಾಮ ಅಕ್ಕಪಕ್ಕದ ಹೊಲದಲ್ಲಿ ಕಾಯಕ ನಿರತ ಕೃಷಿಕರು ಹಾಗೂ ಸಮೀಪದಲ್ಲಿದ್ದ ಬಾಲಕಿಯ ತಾಯಿ ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಸ್ಥಳದಲ್ಲೇ ಥಳಿಸಿದ ಘಟನೆ ನಡೆದಿದೆ. ಕಾರ್ಮಿಕ ಸಂಘಟನೆಯ ಮುಖಂಡರು ಸಂತ್ರಸ್ತೆ ಬಾಲಕಿಯ ಕುಟುಂಬದ ಬೆಂಬಲಕ್ಕೆ ನಿಂತಿದ್ದು, ಪ್ರಕರಣ ವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಡಿವೈಎಸ್ಪಿ  ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ, ಪಿಎಸ್ ಐ ಮಹಾಂತೇಶ ಪಾಟೀಲ ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next