Advertisement

ವಾರದಲ್ಲಿ ಒಂದು ದಿನ ಉಡುಪಿಯಲ್ಲಿ: ಶೋಭಾ

10:26 AM Jun 02, 2019 | Team Udayavani |

ಕುಂದಾಪುರ: ಸಂಸತ್‌ ಅಧಿವೇಶನ ಸಮಯ ಹೊರತುಪಡಿಸಿ, ಬಾಕಿ ಉಳಿದ ಅವಧಿಯಲ್ಲಿ ವಾರದಲ್ಲಿ ಒಂದು ದಿನ ಉಡುಪಿ ಹಾಗೂ ಮತ್ತೂಂದು ದಿನ ಚಿಕ್ಕಮಗಳೂರಿನಲ್ಲಿದ್ದು, ಪ್ರತಿ ತಾಲೂಕಿಗೂ ಭೇಟಿ ನೀಡಿ ಜನರ ಅಹವಾಲು ಆಲಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕುಂದಾಪುರ ಬಿಜೆಪಿ ಕಚೇರಿಗೆ ಶನಿವಾರ ಆಗಮಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವೆ. ಕೇಂದ್ರ ಸರಕಾರದ ಅಮೃತ ಜಲ ಯೋಜನೆಗೆ ಅನುದಾನ ನೀಡಿದ್ದು, ರಾಜ್ಯ ಸರಕಾರದ ವಿಳಂಬ ಧೋರಣೆ ತಾಳಿದೆ. ಮಲ್ಪೆ ಬೋಟ್‌ ದುರಂತದ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಳಿ ಮಾತನಾಡುವೆ. ಕುಂದಾಪುರ ಶಾಸಿ ಸರ್ಕಲ್‌ ಬಳಿಯ ಫ್ಲೆ$çಓವರ್‌ ಹಾಗೂ ಕುಂದಾಪುರ – ಬೈಂದೂರು ಹೆದ್ದಾರಿ ಕಾಮಗಾರಿ ಕುರಿತ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಜೂ. 6ರಂದು ದಿಲ್ಲಿಯಲ್ಲಿ ಸಚಿವ ನಿತಿನ್‌ ಗಡ್ಕರಿ ಜತೆ ಚರ್ಚಿಸುವೆ ಎಂದರು.

ಮೀನುಗಾರರ ಬೆಂಬಲ
ಚುನಾವಣೆಯಲ್ಲಿ ಮೊಗವೀರ ಸಮುದಾಯ ಬಿಜೆಪಿ ಕೈ ಹಿಡಿದಿದ್ದರಿಂದ ನನಗೆ ಬೃಹತ್‌ ಅಂತರದ ಗೆಲುವು ಸಿಕ್ಕಿದೆ. ಹೆಜಮಾಡಿ, ಕೋಡಿ – ಕನ್ಯಾನ ಬಂದರು, ಮಲ್ಪೆ ರಸ್ತೆ ವಿಸ್ತರಣೆ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸಲಿದೆ ಎಂದರು.

ಸಂಸದರನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನಾ ಸ್ವಾಗತಿಸಿದರು. ಜಿ.ಪಂ. ಸದಸ್ಯರಾದ ಶ್ರೀಲತಾ ಶೆಟ್ಟಿ, ಸುಪ್ರೀತಾ ಕುಲಾಲ್‌, ಕುಂದಾಪುರ ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಉಪಾಧ್ಯಕ್ಷ ರಾಮ್‌ ಕಿಶನ್‌ ಹೆಗ್ಡೆ, ಸದಸ್ಯೆ ರೂಪಾ ಪೈ, ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಪ್ರ. ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಪುರಸಭೆ ಮಾಜಿ ಅಧ್ಯಕ್ಷ ಮೋಹನದಾಸ್‌ ಶೆಣೈ ಉಪಸ್ಥಿತರಿದ್ದರು.

Advertisement

ಸರಕಾರ ಬೀಳಿಸುವ ಕೆಲಸಕ್ಕೆ ಕೈಹಾಕಲ್ಲ
ರಾಜ್ಯದ ಮೈತ್ರಿ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ. ಜೆಡಿಎಸ್‌, ಕಾಂಗ್ರೆಸ್‌ ನಾಯಕರ ಮಧ್ಯೆಯೇ ಒಳ ಜಗಳವಿದೆ. ಜನರೂ ಬೇಸತ್ತಿದ್ದಾರೆ. ಜೆಡಿಎಸ್‌ – ಕಾಂಗ್ರೆಸ್‌ ಶಾಸಕರು ಅವರ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಂದರೆ ಸ್ವಾಗತಿಸುತ್ತೇವೆ. ದೋಸ್ತಿ ಸರಕಾರ ಒಳ ಬೇಗುದಿಯಿಂದಲೇ ಬೀಳಲಿದೆ. ನಾವು ಬೀಳಿಸಬೇಕಾದ ಆವಶ್ಯಕತೆಯೇ ಇಲ್ಲ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next