ಹುಬ್ಬಳ್ಳಿ: ಹತ್ತು ಲಕ್ಷ ಉದ್ಯೋಗ ಸೃಷ್ಟಿ ಎಲ್ಲಿ ಎಂದು ಕೇಳುವವರಿಗೆ ನೇಮಕಾತಿ ಪತ್ರ ಪಡೆದ ಉದ್ಯೋಗಿಗಳೇ ಉತ್ತರ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ನುಡಿದಂತೆ ನಡೆದ ಸರಕಾರವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ, ಇಎಸ್ಐ ಇಲಾಖೆಯ ಸುಮಾರು 200 ಜನ ಉದ್ಯೋಗಿಗಳಿಗೆ ಉದ್ಯೋಗ ಪತ್ರ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ 10 ಲಕ್ಷ ಸರಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಇದೀಗ ಉದ್ಯೋಗ ನೇಮಕ ಪತ್ರ ನೀಡಿಕೆಗೆ ಚಾಲನೆ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.
10 ಲಕ್ಷ ಉದ್ಯೋಗ ನೀಡಿಕೆ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 75 ಸಾವಿರ ಯುವಕ-ಯವತಿಯರಿಗೆ ನೇಮಕಪತ್ರ ನೀಡಲಾಗುತ್ತಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 200 ಉದ್ಯೋಗಿಗಳಿಗೆ ನೇಮಕ ಪತ್ರ ನೀಡಲಾಗುತ್ತಿದೆ ಎಂದರು.
Related Articles
ಇದನ್ನೂ ಓದಿ:ಕಳ್ಳತನವಾಗಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಮಾಲಕರಿಗೆ ಮರಳಿಸಿದ ಪೊಲೀಸರು
ಈ ಹಿಂದೆ ರೈಲ್ವೆ ನಿಲ್ದಾಣ, ರೈಲು ಬೋಗಿಗಳು ಹೇಗಿದ್ದವು ಈಗ ಹೇಗಿವೆ. ರೈಲು ನಿಲ್ದಾಣಗಳು ವಿಮಾನ ನಿಲ್ದಾಣ ದಂತೆ ಕಂಗೊಳಿಸುತ್ತಿವೆ ಎಂದರು.
ದೇಶ ಸ್ವಾತಂತ್ರ್ಯ ಶತಮಾನೋತ್ಸವ ವೇಳೆ ಇನ್ನಷ್ಟು ಬಲವರ್ಧನೆ ಗೊಳ್ಳಬೇಕೆಂಬುದು ಪ್ರಧಾನಿಯವರ ಆಶಯವಾಗಿತ್ತು, ಅದಕ್ಕೆ ಪೂರಕವಾಗಿ ಪ್ರಧಾನಿ ಕ್ರಮ ಕೈಗೊಂಡಿದ್ದಾರೆ ಎಂದರು.
ವಿಧಾನಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ, ವಿಧಾನಸಭೆ ಸದ್ಯಸ್ಯ ,ನೈಋತ್ಯ ರೈಲ್ವೆ ಜಿಎಂ ಸೇರಿದಂತೆ ಅನೇಕರು ಇದ್ದರು.