Advertisement

ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ಶಂಕರಾಚಾರ್ಯರ ಹೆಸರು ಸೂಕ್ತ :ಕರಂದ್ಲಾಜೆ

12:16 PM Sep 19, 2021 | Team Udayavani |

ಅಂಕೋಲಾ : ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರು ಬೇಕು ಅನ್ನುವ ಬೇಡಿಕೆ ಇದೆ. ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಶಂಕರಾಚಾರ್ಯ ಹೆಸರನ್ನು ಇಡುವುದು ಸೂಕ್ತ ವಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕೈಗಡಿ ಗ್ರಾಮದಲ್ಲಿ ಪ್ರತಿಕ್ರೀಯಿಸಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ . ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಪೋಸಲ್ ನೀಡಿದರೆ ಕೇಂದ್ರದ ಕಲ್ಚರ್ ಡಿಪಾರ್ಟಮ್ಮೆಂಟ್ ನಲ್ಲಿ ಪರಿಶೀಲನೆ ಮಾಡಲು ಒತ್ತಡ ತರುತ್ತೇನೆ ಎಂದರು.

ಇನ್ನು ದೇವಾಲಯಗಳನ್ನ ಒಡೆಯುವ ಮೊದಲು ಊರ ಜನರ ವಿಶ್ವಾಸ ಗಳಿಸಬೇಕು.ಆ ದೇವಾಲಯಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು, ದೇವಾಲಯ ಅಕ್ರಮವಾಗಿದ್ದರೇ ಊರಿನ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು.

ಇದನ್ನೂ ಓದಿ : ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

2008ರ ದೇವಾಲಯ ಯಾವುದಿದೆ, ಅದನ್ನ ಸಕ್ರಮ ಮಾಡಬಹುದು ಎಂದು ಸುಪ್ರಿಮಕೋರ್ಟ್ ಆದೇಶವಿದೆ ಎಂದು ಮೈಸೂರಿನ ಘಟನೆಗೆ ಖಂಡನೆ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ , ಮೈಸೂರು ದೇವಾಲಯ ಚೋಳರ ಕಾಲದ್ದಾಗಿದೆ. ಸಕ್ರಮಗೊಳಿಸಲು ಪ್ರಕ್ರೀಯೆ ಮಾಡಬೇಕು.2008 ರ ನಂತರ ಕಟ್ಟಿದ ದೇವಾಲಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಪುರಾತನ ದೇವಾಲಯಗಳನ್ನ ಉಳಿಸುವ, ಸಕ್ರಮಗೊಳಿಸುವ ಬಗ್ಗೆ ಸರ್ಕರ ಪರಿಶೀಲಿಸಬೇಕು ಎಂದರು. ಇದೇ ಸಪ್ಟೆಂಬರ್ 22 ಕ್ಕೆ ಕೃಷಿ ರಪ್ತುದಾರರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next