Advertisement

ಮೂರನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಿವರಾಜ ತಂಗಡಗಿ

11:14 AM May 27, 2023 | Team Udayavani |

ಕನಕಗಿರಿ: ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ‌ ಜಯ ಬೇರಿ ಸಾಧಿಸಿದ ಶಾಸಕ ಶಿವರಾಜ ತಂಗಡಗಿ ಮೂರು ಬಾರಿ ಕ್ಷೇತ್ರದಿಂದ ಗೆದ್ದು ಎರಡು ಬಾರಿ ಸಚಿವರಾಗಿದ್ದು ಮೂರನೇ ಬಾರಿಯೂ ಇಂದು ವಿಧಾನ‌ ಸಭೆಯಲ್ಲಿ ಸಚಿವರಾಗಿ ಪ್ರಮಾಣ ವಚನ‌ ಸ್ವೀಕರಿಸಲಿದ್ದಾರೆ.

Advertisement

ಕಳೆದ‌ 2008 ರಲ್ಲಿ ಮೊದಲ ಬಾರಿ ಪಕ್ಷೇತರ‌ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿ‌ ಜಯ ಸಾಧಿಸಿ, ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಬಿಜೆಪಿ‌ ಸರ್ಕಾರದಲ್ಲಿ ಸಕ್ಕರೆ ಕೃಷಿ ಉತ್ಪನ್ನ ಖಾತೆ ಗಿಟ್ಟಿಸಿಕೊಂಡಿದ್ದರು.

2013 ರಲ್ಲಿ ಕಾಂಗ್ರೇಸ ಪಕ್ಷದಿಂದ‌ ಸ್ಪರ್ದೆ ಮಾಡಿ‌ ಜಯ ಗಳಿಸಿ ಬಹುಮತದ ಕಾಂಗ್ರೇಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸೂಗೂರು ವಿರುದ್ಧ ಸೋಲುಂಡು ಕಳೆದ ಐದು ವರ್ಷ ಕೊಪ್ಪಳ‌ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಹಾಗೂ ತಮ್ಮ‌ ಅವಧಿಯ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರದ ದುರಾಡಳಿತ ಕುರಿತು ತಮ್ಮ‌ ಮಾತಿನ‌ ದಾಟಿಯಲ್ಲಿ ಜನರ‌ ಮನಸ್ಸು ಗೆಲ್ಲುವಲ್ಲಿ ಪ್ರಯತ್ನ ಮಾಡಿದರು.

ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವರಾಜ ದಢೇಸೂಗೂರು ಎದುರು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೆಚ್ಚಿನ ಅಂತರದ ಗೆಲುವು ಸಾಧಿಸುವ ಮೂಲಕ ವಿಧಾನ‌ ಸಭೆ ಪ್ರವೇಶ ಮಾಡಿದರು.

Advertisement

ಬೋವಿ ಸಮಾಜದವರಾದ ಶಾಸಕ ಶಿವರಾಜ ತಂಗಡಗಿಗೆ ಜಿಲ್ಲೆಯಲ್ಲಿ ಘಟಾನುಘಟಿ ನಾಯಕರ ನಡುವೆ ಸಚಿವ ಸ್ಥಾನ‌ ದೊರೆತ್ತಿದ್ದು ಕಾರ್ಯಕರ್ತರಲ್ಲಿ ಸಂತಸ ಉಂಟು ಮಾಡಿದೆ.

ಈಗಾಗಲೇ ಕನಕಗಿರಿ, ಕಾರಟಗಿ, ಸೇರಿದಂತೆ ಸುತ್ತ ಮುತ್ತ ಗ್ರಾಮಗಳ ಜನರು ಬೆಂಗಳೂರಿನಲ್ಲಿರುವ ಶಿವರಾಜ‌ ತಂಗಡಗಿ ನಿವಾಸಕ್ಕೆ ತೆರಳಿ ಅಭಿನಂದನೆ‌‌ ಸಲ್ಲಿಸುತ್ತಿದ್ದಾರೆ. ಇನ್ನೆನ್ನೂ ಸಚಿವರಾಗಿ ಪ್ರಮಾಣ ವಚನ‌ ಸ್ವೀಕರಿಸಲಿದ್ದು ಯಾವ ಖಾತೆ ದೊರೆಯಬಹುದು ಎಂಬ ಉತ್ಸಾಹದಲ್ಲಿ‌ ಕ್ಷೇತ್ರದ‌ ಜನರು ಕಾಯುತ್ತಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಗಾಳಿ ಸಹಿತ ಭಾರೀ ಮಳೆ: ವಿಮಾನ ಹಾರಾಟದಲ್ಲಿ ವ್ಯತ್ಯಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next