ಭೋಪಾಲ್: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ತನ್ನ ಕ್ಯಾಬಿನೆಟ್ ಗೆ ಮೂವರು ಶಾಸಕರನ್ನು ಸೇರಿಸಿಕೊಂಡಿದ್ದಾರೆ.
ಮಾಜಿ ಸಚಿವ ಮತ್ತು ರೇವಾ ಕ್ಷೇತ್ರದ ನಾಲ್ಕು ಬಾರಿ ಶಾಸಕ ರಾಜೇಂದ್ರ ಶುಕ್ಲಾ, ಮಹಾಕೋಶಲ್ ಪ್ರದೇಶದ ಬಾಲಘಾಟ್ ನಿಂದ ಏಳು ಬಾರಿ ಶಾಸಕ, ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಗೌರಿಶಂಕರ್ ಬಿಸೆನ್ ಮತ್ತು ಖರ್ಗಾಪುರದಿಂದ ಮೊದಲ ಬಾರಿಗೆ ಶಾಸಕ ರಾಹುಲ್ ಲೋಧಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ:KMC: ಅಪರೂಪದ ಮೂಳೆ ಮಜ್ಜೆ ಕಸಿ ಯಶಸ್ವಿ; ಕರಾವಳಿ ಕರ್ನಾಟಕದಲ್ಲಿ ಮೊದಲ ಪ್ರಕರಣ
ಇನ್ನು ಮೂವರು ಸದಸ್ಯರ ಸೇರ್ಪಡೆಯೊಂದಿಗೆ ಚೌಹಾಣ್ ನೇತೃತ್ವದ ಸಂಪುಟದಲ್ಲಿ ಈಗ 34 ಸದಸ್ಯರಿದ್ದಾರೆ. ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಭೋಪಾಲ್ ನ ರಾಜಭವನದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಮೂವರು ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು.
ರಾಹುಲ್ ಲೋಧಿ ಅವರು ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಅವರ ಸೋದರಳಿಯ. ಗೌರಿಶಂಕರ್ ಬಿಸೆನ್ ಮತ್ತು ರಾಹುಲ್ ಲೋಧಿ ಅವರು ಮಧ್ಯಪ್ರದೇಶದ ಜನಸಂಖ್ಯೆ ಶೇ.45ರಷ್ಟಿರುವ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.