Advertisement

ಶಿವಪಾಲ್‌ ಯಾದವ್‌ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ

10:59 PM Jan 29, 2023 | Team Udayavani |

ಲಖನೌ: ಸಮಾಜವಾದಿ ಪಕ್ಷ(ಎಸ್‌ಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ಅಖೀಲೇಶ್‌ ಯಾದವ್‌ ಮತ್ತು ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

Advertisement

ಕೌಟುಂಬಿಕ ಕಲಹದಿಂದಾಗಿ 2016ರಲ್ಲಿ ಪಕ್ಷದಿಂದ ಹೊರನಡೆದಿದ್ದ ಶಿವಪಾಲ್‌, ಮುಲಾಯಂ ಸಿಂಗ್‌ ಯಾದವ್‌ ನಿಧನದಿಂದಾಗಿ ತೆರವಾಗಿದ್ದ ಮೈನ್ಪುರಿ ಲೋಕಸಭಾ ಕ್ಷೇತ್ರಕ್ಕೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಅಖೀಲೇಶ್‌ ಪತ್ನಿ ಡಿಂಪಲ್‌ ಯಾದವ್‌ ಅವರಿಗೆ ಬಾಹ್ಯ ಬೆಂಬಲ ನೀಡಿದ್ದರು. ನಂತರ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಎಸ್‌ಪಿ ಭಾನುವಾರ ತನ್ನ 62 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಘೋಷಿಸಿದ್ದು, ಪಟ್ಟಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಕಿರಣ್ಮೋಯ್‌ ನಂದಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮತ್ತು ರಾಮ್‌ ಗೋಪಾಲ್‌ ಯಾದವ್‌ ರಾಷ್ಟ್ರೀಯ ಪ್ರಮುಖ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿ¨ªಾರೆ. ಪಕ್ಷದ ಖಜಾಂಚಿಯಾಗಿ ಸುದೀಪ್‌ ರಂಜನ್‌ ಸೇನ್‌ ನೇಮಕವಾಗಿದ್ದಾರೆ. ಮೊಹಮ್ಮದ್‌ ಅಜಂ ಖಾನ್‌, ಸ್ವಾಮಿ ಪ್ರಸಾದ್‌ ಮೌರ್ಯ, ರವಿ ಪ್ರಕಾಶ್‌ ವರ್ಮಾ, ಬಲರಾಮ್‌ ಯಾದವ್‌ ಸೇರಿದಂತೆ ಒಟ್ಟು 14 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next