Advertisement

ಕನ್ನಡ ನಾಡಿಗೆ ಸಿದ್ದರಾಮೇಶ್ವರರ ಕೊಡುಗೆ ಅಪಾರ

12:19 PM Feb 01, 2023 | Team Udayavani |

ಎಚ್‌.ಡಿ.ಕೋಟೆ: ಇತಿಹಾಸದ ಉದ್ದಗಲಕ್ಕೂ ಇತರ ಸಮುದಾಯಗಳಿಗೆ ಸಹಕಾರಿಯಾಗಿಶ್ರಮಿಸುತ್ತಿರುವ ಬೋವಿ ಸಮಾಜ ಶ್ರಮಜೀವಿಗಳು.ಕುಲ ಕಸುಬನ್ನೇ ಅವಲಂಭಿಸದೆ ಮಕ್ಕಳನ್ನುಸುಶಿಕ್ಷಿತರನ್ನಾಗಿಸುವಂತೆ ಮಾಸನ ಗಂಗೋತ್ರಿಯಪ್ರೊ.ತಳವಾರ್‌ ಬೋವಿ ಸಮುದಾಯದವರಿಗೆ ಕಿವಿ ಮಾತು ಹೇಳಿದರು.

Advertisement

ಎಚ್‌.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಮತ್ತು ಬೋವಿ ಸಮುದಾಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಅವರ 851ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲದಿಂದ ಸರ್ವ ಸಮಾಜಕ್ಕೂ ಆದ್ಯತೆ ದೊರೆತ ಹಿನ್ನೆಲೆಯಲ್ಲಿ ಬೋವಿ ಸಮಾಜಕ್ಕೂ ಮೀಸಲಾತಿ ಲಭಿಸಿದೆ ಎಂದರು.

12ನೇ ಶತಮಾನದಲ್ಲಿ ಕನ್ನಡ ನಾಡಿನ ಇತಿಹಾಸ ಉಜ್ವಲಗೊಳ್ಳಲು ಸಿದ್ದರಾಮೇಶ್ವರರ ಕೊಡುಗೆ ಅಪಾರ. ಸೊಲ್ಲಾಪುರದಲ್ಲಿ ಜನಿಸಿದ ಸಿದ್ದರಾಮೇಶ್ವರರು ಬಾಲ್ಯದಲ್ಲೇ ಆಧ್ಯಾತ್ಮಿಕತೆ ಮತ್ತು ದೈವಿಕ ಗುಣಗಳನ್ನು ಹೊಂದಿದ್ದವರು. ಬಸವ ಸ್ತೋತ್ರ, ವಚನ 1002 ಸಾಹಿತ್ಯಗಳಲ್ಲಿ ಸಿದ್ದರಾಮೇಶ್ವರ ಗುರ್ತಿಸಿಕೊಂಡವರು. ಕರ್ಮಯೋಗಿಯಾಗಿ ಬೆಳೆದ ಸಿದ್ದರಾಮೇಶ್ವರ ಸೊಲ್ಲಾಪುರವನ್ನು ನಗರನಾಗಿ ಬೆಳೆಸಿದ ಕೀರ್ತಿಗೆ ಪಾತ್ರರಾದವರು. ಸರ್ವರ ಅಭಿವೃದ್ಧಿಗೆ ಪೂರಕವಾಗಿ ಸಂಪತ್ತು ಬಳಸಿಕೊಳ್ಳಬೇಕೆ ಹೊರತು ರಾಜಕೀಯಕ್ಕಾಗಿ ಜಾತಿ ಮತ್ತು ಕುಲಗಳನ್ನು ಬಳಸಿಕೊಳ್ಳಬಾರದುಅನ್ನುವ ಸಿದ್ಧಾಂತ ಸಿದ್ದರಾಮೇಶ್ವರರದು. ಇಂತಹ ತ್ಯಾಗಮಹಿ ಆದರ್ಶ, ಸಿದ್ದಾಂತಗಳನ್ನು ಯುವ ಪೀಳಿಗೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಕೊರೊನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ದಾರ್ಶನಿಕರ ಜಯಂತಿ ಆಚರಣೆಗೆ ತಡೆಯಾಗಿತ್ತು.ಇಡೀ ಸಮುದಾಯಕ್ಕೆ ಬೋವಿ ಸಮುದಾಯದ ಪರಿಶ್ರಮದ ಕೊಡುಗೆ ಅವಿಸ್ಮರಣೀಯ. ಈ ಬಾರಿ ಅದ್ಧೂರಿಯಾಗಿ ಜಯಂತಿ ಆಚರಿಸುತ್ತಿರುವ ಬೋವಿ ಸಮುದಾಯಕ್ಕೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಮತ್ತು ಮೈಸೂರು ನಾಲ್ವಡಿಕೃಷ್ಣರಾಜ ಒಡೆಯರ್‌ ಸಮಾನತೆ ನೀಡಿದವರು. ಬೋವಿ ಸಮುದಾಯಕ್ಕೆ ತಾಲೂಕಿನ ವಡ್ಡರಗುಡಿಬಳಿಯಲ್ಲಿ 26 ಗುಂಟೆ ಜಾಗದಲ್ಲಿ 3 ಕೋಟಿಅಂದಾಜು ವೆಚ್ಚದ ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 3 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಈಗಾಗಲೇ 80 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ, ಬಂಡೆಯನ್ನೂ ಲೆಕ್ಕಿಸದೆ ಜಲಾಶಯಗಳು, ಬಾವಿ, ಕೆರೆಕಟ್ಟೆಗಳನ್ನು ನಿರ್ಮಿಸುವ ಪರಿಶ್ರಮ ಜೀವನದ ಜೀವನ ನಡೆಸುದ ಬೋವಿ ಸಮುದಾಯ ಒಗ್ಗೂಡಿಸುವ ನಿಟ್ಟಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಶ್ರೀಲಕ್ಷ್ಮೀವರದರಾಜ ಸ್ವಾಮಿ ದೇವಸ್ಥಾನದಿಂದ 1ನೇ ಮುಖ್ಯರಸ್ತೆ ಮಾರ್ಗವಾಗಿ ಮೆರವಣಿಗೆ ಹೊರಟುಹುಣಸೂರು ಬೇಗೂರು ರಸ್ತೆ ಮಾರ್ಗವಾಗಿಮೆರವಣಿಗೆ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ತಲುಪಿತು. ಬೋವಿ ಸಮುದಾಯದ ಜಿ.ವಿ.ಸೀತಾರಾಂ,ಎಂ.ಸಿ.ದೊಡ್ಡನಾಯಕ, ಜಯಪ್ರಕಾಶ್‌, ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ, ಪುರಸಭೆ ಅಧ್ಯಕ್ಷೆಅನಿತಾ, ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌, ಸದಸ್ಯರಾದ ನಂಜಪ್ಪ ಇತರರು ಇದ್ದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next