Advertisement

ಶಿವಯೋಗಿ ಸಿದ್ಧರಾಮರು ಸರ್ವ ಜನಾಂಗದ ನಾಯಕ

10:47 AM Jan 16, 2018 | Team Udayavani |

ಆಳಂದ: ಹನ್ನರಡನೇ ಶತಮಾನದಲ್ಲಿ ಬಸವಣ್ಣನವರು, ಅಲ್ಲಮ ಪ್ರಭುಗಳಿಂದ ಪ್ರೇರಪಿತರಾಗಿ ಸತ್ಯ ಶುದ್ಧವಾದ ಕಾಯಕ, ನೀರಿಗಾಗಿ ಕೆರೆ, ಕಟ್ಟೆ ನಿರ್ಮಾಣ ಸೇರಿ ವಚನಗಳ ಮೂಲಕ ಸಾಮಾಜಿಕ ಸಂದೇಶ ನೀಡಿದ ಶಿವಯೋಗಿ ಸಿದ್ದರಾಮರು ಸರ್ವ ಜನಾಂಗಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಬಿ.ಆರ್‌. ಪಾಟೀಲ ಹೇಳಿದರು.

Advertisement

ಪಟ್ಟಟಣದ ಗುರುಭವನ ಆವರಣದಲ್ಲಿ ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣ ಪರಂಪರೆಯಲ್ಲಿ ಸಿದ್ದರಾಮರು ಶಿವಯೋಗಿ ಎಂದು ಕರೆಯಿಸಿಕೊಂಡವರು. ಅವರು ಅನೇಕ ಸಮುದಾಯಗಳ ಆರಾಧ್ಯ ದೈವರಾಗಿದ್ದಾರೆ. ಅವರ ತತ್ವ ಮತ್ತು ವಚನಗಲು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರು ಶರಣ, ಸಂತರ ಮಹಾನ್‌ ಪುರುಷರ ಜಯಂತಿ ಆಚರಣೆ ಮೂಲಕ ಎಲ್ಲ ಸಮುದಾಯಗಳಿಗೆ ಸರ್ಕಾರದಿಂದ ಗೌರವ ಕೊಡುವ ಕೆಲಸ ಮಾಡುತ್ತಿದ್ದಾರೆ ಹೊರತು ಜಾತಿಗಳ ಜನರ ತೃಪ್ತಿಪಡಿಸಲು ಎಂದು ಹೇಳಿದರು.

ಅಧುನಿಕ ಜೀವನದ ಜಂಜಾಟದ ಸಂದರ್ಭಧಲ್ಲಿ ಚರ್ಚೆ, ಚಿಂತನೆ, ಸಾಮರಸ್ಯಕ್ಕಾಗಿ ಜಯಂತಿಗಳು ಅವಕಾಶ ಮಾಡಿಕೊಡುತ್ತಿವೆ. ಈಗ ಜಾತಿ, ಧರ್ಮಗಳ ಮರೆತು ಒಗ್ಗಟ್ಟಾಗಿದ್ದರೆ ದೇಶ ಬಲಿಷ್ಠವಾಗಿರಲು ಸಾಧ್ಯವಿದೆ ಎಂದು ಹೇಳಿದರು. ಉಪನ್ಯಾಸಕ ರಮೇಶ ಮಾಡಿಯಾಳಕರ್‌, ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರು ಶಿವಯೋಗಿ ಸಿದ್ದರಾಮರ ಜೀವನ ಸಾಧನೆ ಪ್ರಸ್ತುತ ಸಮಾಜಕ್ಕೆ ದಾರಿ ದೀಪವಾಗಿದೆ. ಆಚರಣೆಗೆ ತರಲು ಸರ್ವರ ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

Advertisement

ಭೋವಿ ವಡ್ಡರ ಸಮಾಜದ ಜಿಲ್ಲಾ ಉಪಾಧ್ಯಕ್ಷ ತಾಯಪ್ಪ ಗುತ್ತೇದಾರ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ರೇವಣಸಿದ್ದಪ್ಪ ನಾಗೂರೆ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರಅಲಿ ಹವಾಲ್ದಾರ, ಸದಸ್ಯ ಮಲ್ಲಪ್ಪ ಹತ್ತರಕಿ, ವೈಹೀದ್‌ ಜರ್ದಿ, ಗ್ರೇಡ್‌-2 ತಹಶೀಲ್ದಾರ ಬಿ.ಜಿ. ಕುದರಿ, ತಾಪಂ ಸದಸ್ಯ ಶಿವಪ್ಪ ವಾರಿಕ, ಭೋವಿ
ವಡ್ಡರ ಸಮಾಜದ ಅಧ್ಯಕ್ಷ ಬಡೆಪ್ಪ ಜಿ. ದಂಡಗೂಳೆ, ಶೆಟ್ಟಪ್ಪ ಗುತ್ತೇದಾರ, ತಾಪಂ ಇಒ ಡಾ| ಸಂಜಯ ರೆಡ್ಡಿ, ಪಿಎಸ್‌ಐ ಸುರೇಶ ಬಾಬು, ಅಹ್ಮದ್‌ ಅಲಿ ಚುಲಬುಲ್‌, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೆಕ್ಕಿಕ ರಮೇಶ ಮಾಳಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next