Advertisement

Yellapur: ಕುತೂಹಲಕ್ಕೆ ಎಡೆಮಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಶಿವರಾಮ ಹೆಬ್ಬಾರ್ ಭೇಟಿ

11:46 AM Sep 13, 2024 | Team Udayavani |

ಯಲ್ಲಾಪುರ: ಅತ್ತ ಬಿಜೆಪಿಯೂ ಅಲ್ಲ, ಇತ್ತ ಕಾಂಗ್ರೆಸ್ಸು ಅಲ್ಲ ಅಂತಿರುವ ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಖುದ್ದು ಭೇಟಿ ಮಾಡಿದ್ದಾರೆ.

Advertisement

ಹಲವು ಸುತ್ತು ಮಾತುಕಥೆಯಾಡಿದ್ದಾರೆ. ನಂತರ ಬಹಿರಂಗವಾಗಿಯೇ ಹಸ್ತ ಲಾಘವಕ್ಕೆ ಹೆಬ್ಬಾರ್ ಪೋಟೋ ಪೋಸ್ ಕೊಟ್ಟಿದ್ದಾರೆ. ನಂತರ ಸಿದ್ದರಾಮಯ್ಯನವರು ಹೆಬ್ಬಾರ್ ರವರ ಹೆಗಲ ಮೇಲೆ ಕೈ ಹಾಕಿಕೊಂಡು ತಮ್ಮವರೊಂದಿಗೆ ಸಾಗಿದ ದೃಶ್ಯ ಕಂಡುಬಂದಿದೆ. ಕೆಲ ಹೊತ್ತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಹೆಬ್ಬಾರ್ ಏನೆಂಬುದನ್ನು ಬಹಿರಂಗಗೊಳಿಸದಿದ್ದರೂ ಕ್ಷೇತ್ರದ ಅಭಿವೃಧ್ದಿಗೆ ವಿಶೇಷ ಅನುಧಾನ, ನೀರಾವರಿ ಯೋಜನೆಗೆ ಅನುಧಾನ ನೀಡುವಂತೆ ಸಿಎಂ ಅವರಲ್ಲಿ ಬೇಡಿಕೆ ಇಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಆದರೆ ಇಂದಿನ ಈ ಭೇಟಿ ಕ್ಷೇತ್ರದಲ್ಲಿ ತೀವೃ ಕುತೂಹಲ ಮೂಡಿಸಿದೆ. ಅಲ್ಲದೇ ಭೇಟಿಯ ಬಗ್ಗೆ ಹೆಚ್ಚೆಚ್ಚು ಪೋಟೋಗಳನ್ನು ಹರಿಬಿಟ್ಟಿರುವುದರ ಹಿಂದೆ ಏನೋ ಅಡಗಿದೆ ಎಂದು ಜಿಜ್ಞಾಸಿಸಲಾಗುತ್ತಿದೆ. ಹಾಗಂತ ಶಾಸಕ ಹೆಬ್ಬಾರ್ ಮತ್ತು ಸಿದ್ದರಾಮಯ್ಯನವರ ಭೇಟಿ ಇದೇ ಮೊದಲಲ್ಲ. ಆದರೆ ಇವತ್ತಿನ ಭೇಟಿಯಲ್ಲಿ ಇನ್ನೆನೋ ಇದೆ ಎನ್ನಿಸುತ್ತಿದೆ.

content-img

ಇದನ್ನೂ ಓದಿ: Bengaluru: ತಾಯಿ ಬೈಕ್‌ ಕೊಡಿಸದಿದ್ದಕ್ಕೆ ಬಿಎಸ್‌ಸಿ ವಿದ್ಯಾರ್ಥಿ ಆತ್ಮಹತ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.