“ಸಾಮ್ರಾಜ್ಯಗಳನ್ನು ಕಟ್ಟಿದವನನ್ನು ಇತಿಹಾಸ ಎಷ್ಟೋ ಬಾರಿ ಮರೆತಿರಬಹುದು, ಆದರೆ ಧ್ವಂಸ ಮಾಡೋ ನನ್ನಂತವನನ್ನ ಎಂದಿಗೂ ಮರೆತಿಲ್ಲ… ದೆ ಕಾಲ್ ಮಿ ಘೋಸ್ಟ್” ಇಂತಹ ಪವರ್ ಫುಲ್ ಡೈಲಾಗ್ ಕೇಳಿದಾಗಲೇ ಈ ಟ್ರೇಲರ್ ಹೇಗಿದೆ ಎಂಬ ಅಂದಾಜು ನಿಮಗೆ ಸಿಕ್ಕಿರಬಹುದು.
ಹೌದು, ಇದು ಇಂದು ಬಿಡುಗಡೆಯಾದ ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರದ ಟ್ರೇಲರ್ ನ ಒಂದು ಸಂಭಾಷಣೆ. ಗ್ಯಾಂಗ್ ಸ್ಟರ್ ಬ್ಯಾಕ್ ಡ್ರಾಪ್ ನಲ್ಲಿ ಒಂದು ಮಾಸ್ ಟ್ರೇಲರ್ ಕಟ್ಟಿದ್ದಾರೆ ನಿರ್ದೇಶಕ ಶ್ರೀನಿ. ಈ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಫೈಟ್, ಬಂದೂಕುಗಳ ರಾಶಿ, ಬುಲೆಟ್ ಗಳ ಹಾರಾಟ ಹೀಗೆ ಸಾಗುವ ಟ್ರೇಲರ್ ನ ತೂಲಕ ಹೆಚ್ಚಿಸಿದ್ದು ಪ್ರಸನ್ನ ಎಂ.ವಿ ಮತ್ತು ಮಾಸ್ತಿ ಡೈಲಾಗ್ ಗಳು. ಈ ಡೈಲಾಗ್ ಗಳು ಮತ್ತು ಶಿವಣ್ಣನ ಖದರ್ ನಿಂದ ಚಿತ್ರದ ಮಾಸ್ ಅಂಶ ಮತ್ತಷ್ಟು ಹೆಚ್ಚಿದೆ. ಅದರಲ್ಲೂ ಶಿವಣ್ಣ ಗ್ಯಾಂಗ್ ಸ್ಟರ್ ಮತ್ತು ಸಣ್ಣ ವಯಸ್ಸಿನ ಪಾತ್ರದಲ್ಲಿ ಮಿಂಚಿದ್ದಾರೆ. ಶಿವಣ್ಣ ಅವರ ಹಳೇ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಚಿತ್ರದಲ್ಲಿ ಶಿವರಾಜ್ ಕುಮಾರ್ ಜತೆಗೆ ಬಾಲಿವುಡ್ ನಟ ಅನುಪಮ್ ಖೇರ್, ಬಹುಭಾಷಾ ನಟ ಜಯರಾಂ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಶಾಂತ್ ನಾರಾಯಣನ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್ ಕೂಡಾ ಚಿತ್ರದಲ್ಲಿದ್ದಾರೆ. ಚಿತ್ರವು ಅಕ್ಟೋಬರ್ 19ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡಿರುವ ಘೋಸ್ಟ್ ಚಿತ್ರವನ್ನು ಬೀರಬಲ್ ಖ್ಯಾತಿಯ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಮೂಸಿಕ್ ಚಿತ್ರಕ್ಕಿದ್ದು, ಮಹೆಂದ್ರ ಸಿಂಹ ಕ್ಯಾಮರಾ ಕೈಚಳಕವಿದೆ.
https://youtu.be/lI2eFTLOFjI?si=IVgc4-fqxzQvjY0d