Advertisement

ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ

10:22 AM Jul 01, 2022 | Team Udayavani |

ಈ ಸಿನಿಮಾದ ಜರ್ನಿ ನನಗೆ ತುಂಬಾ ಖುಷಿ ಕೊಟ್ಟಿದೆ…’ – ಶಿವರಾಜ್‌ಕುಮಾರ್‌ ಹೀಗೆ ಹೇಳಿದ್ದು “ಬೈರಾಗಿ’ ಬಗ್ಗೆ.

Advertisement

ಶಿವಣ್ಣ ನಟನೆಯ “ಬೈರಾಗಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎಂಟು ತಿಂಗಳ ನಂತರ ಬಿಡುಗಡೆಯಾಗುತ್ತಿರುವ ಶಿವರಾಜ್‌ಕುಮಾರ್‌ ಚಿತ್ರ ಇದಾಗಿದ್ದು, ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ.

ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಬೈರಾಗಿ ನನಗೆ ತುಂಬಾ ಸ್ಪೆಷಲ್‌ ಸಿನಿಮಾ. ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಯೇ ವಿಭಿನ್ನವಾಗಿದೆ. ನಿರ್ದೇಶಕ ವಿಜಯ್‌ ಮಿಲ್ಟನ್‌ ಸಾಕಷ್ಟು ಶ್ರಮ ಹಾಕಿದ್ದಾರೆ. ಆ ಶ್ರಮ ತೆರೆಮೇಲೆ ಎದ್ದು ಕಾಣುವಂತೆ ನಿರ್ಮಾಪಕ ಕೃಷ್ಣ ಸಾರ್ಥಕ್‌ ಯಾವುದಕ್ಕೂ ಕೊರತೆ ಮಾಡದೇ ಸಿನಿಮಾ ನಿರ್ಮಿಸಿದ್ದಾರೆ. ನಾನಿಲ್ಲಿ ಒಬ್ಬ ಸಾಮಾನ್ಯ ಮನುಷ್ಯ ನಾಗಿ ಕಾಣಿಸಿಕೊಂಡಿದ್ದೇನೆ. ಆದರೆ, ಆತನೊಳಗೆ ಒಂದು ಅಸಾಮಾನ್ಯ ಶಕ್ತಿ ಇರುತ್ತದೆ. ಅದೇನು ಎಂಬುದೇ ಸಿನಿಮಾದ ಹೈಲೈಟ್‌. ಚಿತ್ರದಲ್ಲಿ ಮಾಸ್‌ ಎಲಿಮೆಂಟ್ಸ್‌ ಹೆಚ್ಚಿದೆ. ಚಿತ್ರದಲ್ಲಿನ ನನ್ನ ಪ್ರತಿ ಗೆಟಪ್‌ ಹಿಂದೆಯೂ ಒಂದೊಂದು ಕಾರಣವಿದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ.

ಇದನ್ನೂ ಓದಿ:ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video

ಆರಂಭದಲ್ಲಿ ಸುಮಾರು 250 ರಿಂದ 300 ಚಿತ್ರಮಂದಿರಗಳಲ್ಲಿ “ಬೈರಾಗಿ’ ಸಿನಿಮಾವನ್ನು ರಿಲೀಸ್‌ ಮಾಡುವ ಯೋಚನೆಯಲ್ಲಿತ್ತು ಚಿತ್ರತಂಡ. ಆದರೆ, ಸಿನಿಮಾದ ಪ್ರಚಾರ ಕಾರ್ಯದ ವೇಳೆ ಅಭಿಮಾನಿಗಳಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ಸದ್ಯ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಬೈರಾಗಿ’ಯನ್ನು ಬಿಡುಗಡೆ ಮಾಡುತ್ತಿದೆ. ಶುಕ್ರವಾರ ಬೆಳಿಗ್ಗೆಯೇ ಸುಮಾರು 25 ಕೇಂದ್ರಗಳಲ್ಲಿ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯ ದಿನ ಆರು ಪ್ರದರ್ಶನ ನಡೆಯಲಿದೆ.

Advertisement

ಇನ್ನು “ಬೈರಾಗಿ’ ಸಿನಿಮಾ ಬಿಡುಗಡೆಯಾಗುತ್ತಿರುವ ಮೈಸೂರಿನ ಪ್ರಮುಖ ಚಿತ್ರಮಂದಿರದ ಮುಂದೆ ನಟ ಶಿವರಾಜಕುಮಾರ್‌ ಅವರ 60 ಅಡಿ ಎತ್ತರದ ಬೃಹತ್‌ ಕಟೌಟ್‌ ನಿರ್ಮಾಣವಾಗಿದೆ

ಡಾಲಿ-ಶಿವಣ್ಣ ಜೊತೆಯಾಟ: “ಟಗರು’ ಸಿನಿಮಾದಲ್ಲಿ ಡಾಲಿ ಧನಂಜಯ್‌ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ ಈ ಜೋಡಿ “ಬೈರಾಗಿ’ ಮೂಲಕ ಮತ್ತೂಮ್ಮೆ ತೆರೆಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಎದುರು ನೆಗೆಟಿವ್‌ ಶೇಡ್‌ನಲ್ಲಿ ಧನಂಜಯ್‌ ನಟಿಸಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಲು ಇದೂ ಒಂದು ಕಾರಣವಾಗಿದೆ. ಉಳಿದಂತೆ ಚಿತ್ರದಲ್ಲಿ ಪೃಥ್ವಿ ಅಂಬರ್‌, ಅಂಜಲಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳೀನ್‌ ಸಂಗೀತವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next