Advertisement

ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲ: ಕಣ್ಮನ ಸೆಳೆದ “ಶಿವ ಚಿತ್ತಾರ”ಚಿತ್ರಕಲಾ ಸ್ಪರ್ಧೆ

09:29 AM Feb 06, 2023 | Team Udayavani |

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಿಂದ ಮಾ. 5ರ ವರೆಗೆ ನೆರವೇರಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಅತಿರುದ್ರ ಮಹಾಯಾಗ ಸಮಿತಿ ಪ್ರಾಯೋಜಕತ್ವದಲ್ಲಿ ಆರ್ಟಿಸ್ಟ್‌ ಫೋರಮ್‌ ಸಹಯೋಗದೊಂದಿಗೆ ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಶಿವ ಚಿತ್ತಾರ” ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಂದಿ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು.

Advertisement

ಮಣಿಪಾಲ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸೌರಭಾ ಅವರು ಕಾರ್ಯಕ್ರಮ ಉದ್ಘಾಟಿಸಿ, ದೇವರ ಮೇಲಿನ ಅಪಾರ ಭಕ್ತಿಯನ್ನು ಕಲೆಯ ಮೂಲಕ ಭಗವಂತನಿಗೆ ಸಮರ್ಪಿಸಲು ಶಿವ ಚಿತ್ತಾರ ಚಿತ್ರಕಲಾ ಸ್ಪರ್ಧೆ ಒಂದು ಉತ್ತಮ ಮಾರ್ಗವಾಗಿದೆ. ಇದರಿಂದ ಮಕ್ಕಳಲ್ಲಿ ಕಲಾಸಕ್ತಿಯೊಂದಿಗೆ ಧಾರ್ಮಿಕ ಪ್ರಜ್ಞೆಯ ಉದ್ದೀಪನಗೊಳ್ಳಲಿದೆ. ಭಗವಂತನಿಗೆ ಪ್ರೀತಿ ಮತ್ತು ಭಕ್ತಿಯಿಂದ ಕಳೆಯನ್ನು ಸಮರ್ಪಿಸಿದಾಗ ನಮ್ಮೆಲ್ಲ ಕಾರ್ಯಗಳೂ ಯಶಸ್ವಿಯಾಗಲಿವೆ ಎಂದರು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳತಜ್ಞೆ ಡಾ| ಪುಷ್ಪಾ ಕಿಣಿ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಕಲೆಗೆ ಪ್ರಾಶಸ್ತ್ಯ ನೀಡಿದಾಗ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲಿದೆ. ಇಂತಹ ಹವ್ಯಾಸ ಬೆಳೆಸಿಕೊಂಡಾಗ ಮಕ್ಕಳು ಒತ್ತಡದಿಂದ ನಿವಾರಣೆ ಪಡೆಯಬಹುದು ಎಂದರು.

ಆರ್ಟಿಸ್ಟ್‌ ಫೋರಮ್‌ನ ಅಧ್ಯಕ್ಷ ರಮೇಶ್‌ ರಾವ್‌ ಮತ್ತು ತಂಡ ಅತ್ಯಂತ ಪಾರದರ್ಶಕವಾಗಿ ತೀರ್ಪು ನೀಡಿದರು.ಆರ್ಟಿಸ್ಟ್‌ ಫೋರಂನ ಡಾ| ಜನಾರ್ದನ ಹಾವಂಜೆ ಬಹುಮಾನ ವಿಜೇತರನ್ನು ಘೋಷಿಸಿದರು. ಅತಿಥಿಗಳು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

Advertisement

ಆಕರ್ಷಕ ಚಿತ್ರ ಬಿಡಿಸಿದ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅತಿಥಿ ಗಣ್ಯರಿಗೆ ಶಿವನ ಪ್ರೀತ್ಯರ್ಥ ಬಿಲ್ವಪತ್ರೆ ಗಿಡಗಳನ್ನು ನೀಡಿ ಗೌರವಿಸಲಾಯಿತು.

ಫ್ಯಾಬ್ರಿಕ್‌ ಕೊಲಾಜ್‌ ಕಲಾವಿದೆ ಅಪರ್ಣಾ ಮತ್ತಣ್ಣ ಅವರು, ಹೆತ್ತವರು ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದಾಗ ಅವರು ಸ್ಫೂರ್ತಿಯಿಂದ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌ ಅತಿರುದ್ರ ಮಹಾಯಾಗದ ಕುರಿತು ಮಾಹಿತಿ ನೀಡಿದರು. ದೇಗುಲ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್‌ ಠಾಕೂರ್‌ ಅಧ್ಯಕ್ಷತೆ ವಹಿಸಿದ್ದರು.

ಮಣಿಪಾಲದ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸುಜಾತಾ, ಸಾವಿತ್ರಿ ಶ್ರೀಧರ ಸಾಮಂತ್‌, ಶಿಲ್ಪಾ ರಘುಪತಿ ಭಟ್‌, ಆರ್ಟಿಸ್ಟ್‌ ಫೋರಮ್‌ನ ಕಾರ್ಯದರ್ಶಿ ಸಕು ಪಾಂಗಾಳ, ಮರಳು ಶಿಲ್ಪ ಕಲಾವಿದ ಶ್ರೀನಾಥ್‌ ಮಪಾಲ, ದೇಗುಲದ ಮೊಕ್ತೇಸರರಾದ ಸುಭಾಕರ ಸಾಮಂತ್‌, ದಿನೇಶ್‌ ಪ್ರಭು, ಕಾರ್ಯದರ್ಶಿ ಸುರೇಶ್‌ ಶ್ಯಾನುಭಾಗ್‌, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌, ಕಾರ್ಯಕ್ರಮ ಸಂಚಾಲಕರಾದ ಡಾ| ಆಶಾ ಪಾಟೀಲ್‌, ರಶ್ಮಿತಾ ಬಾಲಕೃಷ್ಣ, ಅತಿರುದ್ರ ಮಹಾಯಾಗ ಸಮಿತಿ ಕಾರ್ಯದರ್ಶಿಗಳಾದ ಪ್ರಕಾಶ್‌ ಕುಕ್ಕೆಹಳ್ಳಿ, ಬಾಲಕೃಷ್ಣ ಮದ್ದೋಡಿ, ರತ್ನಾಕರ ಇಂದ್ರಾಳಿ, ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಧನಂಜಯ ಅಮೀನ್‌ ಪೇತ್ರಿ, ಡಾ| ನಿತೇಶ್‌ ಶೆಟ್ಟಿ, ನಗರಸಭೆ ಸದಸ್ಯೆ ವಿಜಯಲಕ್ಷ್ಮೀ, ಆರ್ಟಿಸ್ಟ್‌ ಫೋರಮ್‌ನ ಕಾರ್ಯದರ್ಶಿ ಸಕು ಪಾಂಗಾಳ, ಕಾರ್ಯಕ್ರಮ ಸಂಚಾಲಕರಾದ ಡಾ| ಆಶಾ ಪಾಟೀಲ್‌, ರಶ್ಮಿತಾ ಬಾಲಕೃಷ್ಣ ಉಪಸ್ಥಿತರಿದ್ದರು. ಸಂಚಾಲಕಿ ಸುಚೇತಾ ನಾಯಕ್‌ ಮತ್ತು ಜ್ಯೋತಿ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು.

ಫೆ. 12: “ಬಾಲಶಿವ’ ವೇಷ ಸ್ಪರ್ಧೆ ಮತ್ತು ಸಮರ್ಪಣ ದಿವಸ್‌

ಜಿಲ್ಲಾಮಟ್ಟದ “ಬಾಲಶಿವ’ ವೇಷ ಸ್ಪರ್ಧೆ ಹಾಗೂ ಶ್ರೀ ಅತಿರುದ್ರ ಮಹಾಯಾಗದ ಸಮರ್ಪಣ ದಿವಸ್‌ ಫೆ. 12ರ ಬೆಳಗ್ಗೆ 9ರಿಂದ ದೇಗುಲದ ವಠಾರದಲ್ಲಿ ನಡೆಯಲಿದೆ. ಫೆ. 12ರಂದು ಪ್ರಾರಂಭಗೊಳ್ಳಲಿರುವ ಸಮರ್ಪಣೆಯು ಫೆ. 22ರ ತನಕ ಇರಲಿದೆ. ಭಕ್ತರು ತುಪ್ಪ, ಎಳ್ಳು, ಅಕ್ಕಿ, ಭತ್ತ, ತೆಂಗಿನಕಾಯಿಯನ್ನು ಸಮರ್ಪಿಸಬಹುದು. ಸಮರ್ಪಣೆಗೆ ಬೇಕಾದ ವಸ್ತುಗಳು ದೇಗುಲದಲ್ಲಿ ಲಭ್ಯವಿರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next