Advertisement

ಶಿವಪಾಡಿಯಲ್ಲಿ ಜ. 29ರಂದು”ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್‌”

12:11 AM Jan 27, 2023 | Team Udayavani |

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಿಂದ ಮಾ. 5ರ ವರೆಗೆ ಸಂಪನ್ನಗೊಳ್ಳಲಿರುವ “ಅತಿರುದ್ರ ಮಹಾಯಾಗ’ದ ಪ್ರಯುಕ್ತ ಜ. 29ರ ಬೆಳಗ್ಗೆ ಶ್ರೀ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್‌ ಮತ್ತು ಮೃತ್ತಿಕಾ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ.

Advertisement

ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ, ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇಗುಲದಲ್ಲಿ ಪ್ರಾರ್ಥನೆ, ಯಾಗಶಾಲೆಯ ಭೂಮಿ ಪೂಜೆ, ಪುಣ್ಯತೀರ್ಥ ಕ್ಷೇತ್ರಗಳಿಂದ ತಂದ ಮೃತ್ತಿಕಾ ವಿಹರಣೆ, ಸಾಮೂಹಿಕ ದೀಕ್ಷಾ ಸಂಕಲ್ಪ, ರುದ್ರಾಕ್ಷಿ ಧಾರಣೆಯ ಧಾರ್ಮಿಕ ವಿಧಿಗಳು, ಅನ್ನಸಂತರ್ಪಣೆ ನೆರವೇರಲಿದೆ.

ಅಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್‌ ವಹಿಸಲಿದ್ದಾರೆ. ಸಂಕಲ್ಪ ದಿವಸ್‌ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್‌ ನೆರವೇರಿಸಲಿದ್ದಾರೆ.

ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ| ಜಿ. ಶಂಕರ್‌, ಶ್ರೀ ಕ್ಷೇತ್ರ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್‌ ಶಾಸ್ತ್ರಿ , ಆರೆಸ್ಸೆಸ್‌ ಜಿಲ್ಲಾ ಸಂಘ ಚಾಲಕ್‌ ಡಾ| ನಾರಾಯಣ ಶೆಣೈ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದ ರೆಡ್ಡಿ ಬೆಂಗಳೂರು, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಉಜ್ವಲ್‌ ಡೆವಲಪ ರ್ಸ್ ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಡಾ| ಕೆ. ಕೃಷ್ಣ ಪ್ರಸಾದ್‌, ಬಾಲಕೃಷ್ಣ ಭಂಡಾರಿ ಮುಂಬಯಿ, ಅರುಣ್‌ ಕುಮಾರ್‌ ಉಡುಪಿ, ಪರ್ವತ್‌ ಶೆಟ್ಟಿ ಮುಂಬಯಿ, ಕಾರ್ತಿಕ್‌ ಆರ್‌. ನಾಯಕ್‌ ಕುಂದಾಪುರ, ಶ್ರೀನಿವಾಸ ಪೂಜಾರಿ, ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ಉಪಸ್ಥಿತರಿರಲಿದ್ದಾರೆ ಎಂದು ದೇಗುಲ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್‌ ಠಾಕೂರ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next