Advertisement

ಟೈಗರ್‌ ನಾಗೇಶ್ವರ ರಾವ್‌ ಸಿನಿಮಾಕ್ಕೆ ಶಿವಣ್ಣ ಸಾಥ್‌

04:37 PM May 20, 2023 | Team Udayavani |

ತೆಲುಗು ನಟ ರವಿತೇಜ ಅಭಿನಯಿಸುತ್ತಿರುವ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ “ಟೈಗರ್‌ ನಾಗೇಶ್ವರ ರಾವ್‌’ ತೆರೆಗೆ ಬರಲು ಭರದ ಸಿದ್ಧತೆ ನಡೆಸುತ್ತಿದೆ. ಸದ್ಯ “ಟೈಗರ್‌ ನಾಗೇಶ್ವರ ರಾವ್‌’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮೇ. 24ರಂದು ಸಿನಿಮಾದ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಲು ಪ್ಲಾನ್‌ ಹಾಕಿಕೊಂಡಿದೆ.

Advertisement

ಇನ್ನೊಂದು ವಿಶೇಷವೆಂದರೆ, “ಟೈಗರ್‌ ನಾಗೇಶ್ವರ ರಾವ್‌’ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದ್ದು, ಈ ಸಿನಿಮಾದ ಕನ್ನಡ ಝಲಕ್‌ಗೆ ನಟ ಶಿವರಾಜಕುಮಾರ್‌ ಧ್ವನಿ ನೀಡಿದ್ದಾರೆ.

ಅಂದಹಾಗೆ, 1970ರ ಕಾಲಘಟ್ಟದಲ್ಲಿ ಆಂಧ್ರಪ್ರದೇಶದ ಸ್ಟುವರ್ಟ್‌ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ರವಿತೇಜ ಅವರಿಗೆ ನೂಪುರ್‌ ಸನೋನ್‌ ಮತ್ತು ಗಾಯತ್ರಿ ಭಾರದ್ವಾಜ್‌ ನಾಯಕಿಯರಾಗಿ ಜೋಡಿಯಾಗಿದ್ದಾರೆ.

ಇದೇ ಅಕ್ಟೋಬರ್‌ ವೇಳೆಗೆ ಈ ಸಿನಿಮಾ ತೆರೆಗೆ ಬರುತ್ತಿದ್ದು, “ಟೈಗರ್‌ ನಾಗೇಶ್ವರ ರಾವ್‌’ ಸಿನಿಮಾದ ಕನ್ನಡ ಅವರತರಣಿಕೆಯ ತುಣುಕು ಹೀಗಿರಲಿದೆ ಅನ್ನೋದು ಮುಂದಿನವಾರದ ಹೊತ್ತಿಗೆ ಗೊತ್ತಾಗಲಿದೆ.

ಇನ್ನು ಶಿವರಾಜಕುಮಾರ್‌ ಅಭಿನಯದ “ವಜ್ರಕಾಯ’ ಸಿನಿಮಾದ ಹಾಡಿನಲ್ಲಿ ರವಿತೇಜ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದರು. ಇದೀಗ ರವಿತೇಜ ಸಿನಿಮಾಕ್ಕೆ ಶಿವಣ್ಣ ಧ್ವನಿಯಾಗುವ ಮೂಲಕ ಸಾಥ್‌ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next