Advertisement

ಅರವಿಂದ ಬೆಲ್ಲದ್ ಚಿಕ್ಕಪ್ಪ, ಉದ್ಯಮಿ ಶಿವಣ್ಣ ಬೆಲ್ಲದ ನಿಧನ

10:26 AM Oct 06, 2022 | Team Udayavani |

ಧಾರವಾಡ: ಉದ್ಯಮಿ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ್ (82) ಇಂದು ಬೆಳಗಿನ ಜಾವ ನಿಧನರಾದರು.

Advertisement

ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಹಿರಿಯ ಸಹೋದರ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಬುಧವಾರ ಶಿವಣ್ಣ ಬೆಲ್ಲದ್ ಅವರು ಕಾರು ಚಲಾಯಿಸಿಕೊಂಡು ಹೋಗಿದ್ದರು. ಉಪನಗರ ಪೊಲೀಸ್ ಠಾಣೆ ಬಳಿ ಬಂದಾಗ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಪ್ರಜ್ಞೆ ತಪ್ಪಿದ ಕಾರಣ ಕಾರು ಡಿವೈಡರ್ ಗೆ ಗುದ್ದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಶಿವಣ್ಣ ಅವರು ಕಾರು ಡೀಲರ್ ಉದ್ಯಮದ ಜೊತೆಗೆ ಲಿಂಗಾಯತ ಸಮಾಜದ ಮುಖಂಡರಾಗಿ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ:ಭೀಕರ ಅಪಘಾತ: ಸರ್ಕಾರಿ ಬಸ್ ಗೆ ಶಾಲಾ ಪ್ರವಾಸದ ಬಸ್ ಢಿಕ್ಕಿ; 9 ಮಂದಿ ಸಾವು!

Advertisement

ಅಲ್ಲದೆ, ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧಾರವಾಡ ಚೆನ್ನ ಬಸವೇಶ್ವರ ನಗರದಲ್ಲಿ ಲಿಂಗಾಯತ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಇಲ್ಲಿನ ಹೊಸಯಲ್ಲಾಪೂರ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಬೆಲ್ಲದ್ ಅವರ ಕುಟುಂಬ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next