Advertisement

ಮಿಸ್ಸಿಂಗ್‌ ಬಾಯ್‌ ಮೆಚ್ಚಿಕೊಂಡ ಶಿವಣ್ಣ

09:49 AM Apr 05, 2019 | Team Udayavani |

ಶಿವರಾಜಕುಮಾರ್‌ ಅಭಿನಯದ ತಾಯಿ ಸೆಂಟಿಮೆಂಟ್‌ ಚಿತ್ರ ಅಂದಾಕ್ಷಣ ಥಟ್ಟನೆ ನೆನಪಿಗೆ ಬರೋದೇ “ಜೋಗಿ’ ಚಿತ್ರ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ. ಯಾಕೆಂದರೆ, ಪ್ರೇಮ್‌ ನಿರ್ದೇಶನದಲ್ಲಿ ಮೂಡಿಬಂದ “ಜೋಗಿ’ ಚಿತ್ರದಲ್ಲಿ ಶಿವರಾಜಕುಮಾರ್‌ ಹಾಗು ಅರುಂಧತಿ ನಾಗ್‌ ಅವರು ಅದ್ಭುತವಾಗಿ ನಟಿಸುವ ಮೂಲಕ ತಾಯಿ, ಮಗನ ಮಮತೆ, ಬಾಂಧವ್ಯ, ಪ್ರೀತಿ ವಾತ್ಸಲ್ಯ ಬಗ್ಗೆ ಇನ್ನಷ್ಟು ಸಾರಿದ್ದರು. ಇದೆಲ್ಲಾ ಹೀಗೆಕೆ ಎಂಬ ಪ್ರಶ್ನೆ ಎದುರಾಗಬಹುದು.

Advertisement

ಶಿವರಾಜಕುಮಾರ್‌ ಅವರು “ಜೋಗಿ’ ರೀತಿಯಂತೆಯೇ ಮತ್ತೂಂದು ಪವರ್‌ಫ‌ುಲ್‌ ಸ್ಕ್ರಿಪ್ಟ್ ಸಿಕ್ಕರೆ ಖಂಡಿತ ನಾನು ಪುನಃ ಜೋಗಿ ಆಗಲು ರೆಡಿ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಶಿವರಾಜಕುಮಾರ್‌ ಅವರು ಹೀಗೆ ಹೇಳಲು ಕಾರಣ, ಮತ್ತದೇ ತಾಯಿ ಸೆಂಟಿಮೆಂಟ್‌ ಚಿತ್ರ. ಹೌದು, ರಘುರಾಮ್‌ ನಿರ್ದೇಶನದ “ಮಿಸ್ಸಿಂಗ್‌ ಬಾಯ್‌’ ಚಿತ್ರ ಕೂಡ ತಾಯಿ ಮತ್ತು ಮಗನ ನೈಜ ಕಥೆ ಹೊಂದಿರುವ ಚಿತ್ರ. ಈ ಚಿತ್ರವನ್ನು ಶಿವರಾಜಕುಮಾರ್‌ ಇತ್ತೀಚೆಗೆ ವೀಕ್ಷಿಸಿ, ನಿರ್ದೇಶಕರ ಪ್ರಯತ್ನ ಮತ್ತು ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಎರಡು ದಶಕಗಳಿಗೂ ಹೆಚ್ಚು ಕಾಲದ ಕಥೆ
ಹುಡುಕಿ, ಅದಕ್ಕೆ ತಕ್ಕಂತ ಚಿತ್ರಕಥೆ ಹೆಣೆದು,  ಭಾವನಾತ್ಮಕವಾಗಿ ಎಲ್ಲರನ್ನು ಸೆಳೆಯುವಂತಹ
ಚಿತ್ರ ಮಾಡಿರುವ ಬಗ್ಗೆಯೂ ಸಂತಸಗೊಂಡಿದ್ದಾರೆ.

ಈ ವೇಳೆ ಮಾತನಾಡುತ್ತಲೇ, ಅವರು “ಮಿಸ್ಸಿಂಗ್‌ ಬಾಯ್‌’ ಒಂದೊಳ್ಳೆಯ ಪ್ರಯತ್ನ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು, ತಾಯಿ-ಮಗನ ಸೆಂಟಿಮೆಂಟ್‌. ತಾಯಿ ಸೆಂಟಿಮೆಂಟ್‌ ಚಿತ್ರದಲ್ಲಿ ಯಾರೇ ಇದ್ದರೂ ಅದು ಅದ್ಭುತವಾಗಿಯೇ ಇರುತ್ತೆ. ಯಾವುದೇ ಸಂಬಂಧಗಳು ಬದಲಾಗಬಹುದು. ಆದರೆ, ತಾಯಿ, ಮಗನ ಸಂಬಂಧ ಮಾತ್ರ ಎಂದೂ ಬದಲಾಗಲ್ಲ. ಅದು ಸಾಧ್ಯವೂ ಇಲ್ಲ’ ಎಂಬುದು ಶಿವರಾಜಕುಮಾರ್‌ ಮಾತು. ಎಲ್ಲರೂ “ಜೋಗಿ’ ರೀತಿಯ ಸಿನಿಮಾದಲ್ಲಿ ನಿಮ್ಮನ್ನು ನೋಡಬಯಸುತ್ತಿದ್ದಾರೆ ಎಂಬ ಪ್ರಶ್ನೆಗೆ, ಜೋಗಿಯಂತಹ ಪವರ್‌ಫ‌ುಲ್‌ ಕಥೆ ಸಿಗಬೇಕು. ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇನೆ. ಮುಂದೆ ಅಂತಹ ಅವಕಾಶ ಸಿಕ್ಕರೂ ಸಿಗಬಹುದು’ ಎಂಬುದು ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next