Advertisement

ಪಕ್ಷಾಂತರಕ್ಕೆ ಕಡಿವಾಣ: Shivamurthy Shivacharya Mahaswamiji

10:42 PM Apr 10, 2023 | Team Udayavani |

ಸಿರಿಗೆರೆ: ನಮ್ಮ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಯಶಸ್ವಿಯಾಗಿ ಜಾರಿಗೊಂಡಿಲ್ಲ. ಪಕ್ಷಾಂತರಕ್ಕೆ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸದ್ಧರ್ಮ ನ್ಯಾಯಪೀಠದ ಪ್ರಾಂಗಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಚುನಾವಣೆ ಸಂದರ್ಭ ಒಂದು ಪಕ್ಷದಿಂದ ಮತ್ತೂಂದು ಪಕ್ಷಕ್ಕೆ ಟಿಕೆಟ್‌ಗಾಗಿ ಹಾರುವ ಕೆಲಸಕ್ಕೂ ಕಡಿವಾಣ ಬೀಳಬೇಕು. ರಾಜಕೀಯ ಪಕ್ಷಗಳು ಕನಿಷ್ಠ ಐದು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತನಾಗಿದ್ದ ವ್ಯಕ್ತಿಗೆ ಮಾತ್ರ ಟಿಕೆಟ್‌ ಕೊಡಬೇಕು. ಆಗ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಗಟ್ಟಿತನ ಬರುತ್ತದೆ. ಇಂತಹ ಸಂಕಲ್ಪಗಳು ನಮ್ಮ ರಾಜ್ಯದಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಇದ್ದರೆ ಹೆಚ್ಚಿನ ಸಂಖ್ಯೆಯ ಶಾಸಕರು ಗೆದ್ದು ಬಂದಿರುವ ಪಕ್ಷ ಸರಕಾರ ರಚಿಸಬೇಕು. ಉಳಿದವರು ಬೆಂಬಲವಾಗಿ ನಿಲ್ಲ ಬೇಕು. ಪûಾಂತರ ಅಥವಾ ಇನ್ನಿತರ ಕಾರಣಗಳಿಂದ ತೆರವಾಗುವ ಸ್ಥಾನಕ್ಕೆ ಮರು ಚುನಾವಣೆ ನಡೆಸದೆ ಎರಡನೇ ಸ್ಥಾನ ಗಳಿಸಿದ ವ್ಯಕ್ತಿಯನ್ನು ಆಯ್ಕೆಯಾದಂತೆ ಘೋಷಿಸುವ ಪದ್ಧತಿ ಜಾರಿಗೊಳ್ಳಬೇಕು. ಇದರಿಂದ ಚುನಾವಣೆ ವೆಚ್ಚ, ರೆಸಾರ್ಟ್‌ ರಾಜಕೀಯ ಎರಡೂ ಕೊನೆಗೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next